ಉತ್ತರ ಪ್ರದೇಶ ಕದನ । ಚುನಾವಣಾ ಪೂರ್ವ ಸಮೀಕ್ಷೆ ನಿಷೇಧಕ್ಕೆ ಸಮಾಜವಾದಿ ಪಕ್ಷದ ಆಗ್ರಹ

Prasthutha|

ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಟಿವಿ ಚಾನೆಲ್ ಗಳು ನಡೆಸುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಗಳ ಮೇಲೆ ತಕ್ಷಣ ನಿಷೇಧ ಹೇರುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷ ಪತ್ರದ ಮೂಲಕ ಆಗ್ರಹಿಸಿದೆ.

- Advertisement -

ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಬರೆದ ಪತ್ರದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ಮತದಾರರನ್ನು ದಾರಿ ತಪ್ಪಿಸಿದಂತಾಗುತ್ತದೆ ಮತ್ತು ಪಾರದರ್ಶಿಕ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಟಿವಿ ಚಾನೆಲ್ ಗಳಲ್ಲಿ ಸಮೀಕ್ಷೆ ನಡೆಸದಂತೆ ನಿಷೇಧ ಹೇರಲು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪತ್ರದಲ್ಲಿ ಚುನಾವಣಾ ಆಯೋಗವನ್ನು ಅವರು ಆಗ್ರಹಿಸಿದ್ದಾರೆ.

ಪತ್ರದ ಪ್ರತಿಯೊಂದನ್ನು ಉತ್ತರ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿಗೂ ರವಾನಿಸಲಾಗಿದೆ.

- Advertisement -

ಆಡಳಿತರೂಢ ಬಿಜೆಪಿ ಸರ್ಕಾರದ ಜತೆ ಕೈಜೋಡಿಸಿರುವ ಆರೋಪ ಹೊತ್ತ ಹಲವು ಟಿವಿ ಚಾನೆಲ್ ಗಳು ಈ ಚುನಾವಣೆಯಲ್ಲಿ ಬಿಜೆಪಿ ಮರು ಆಯ್ದೆಯಾಗಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆ ಬಿತ್ತರಿಸುತ್ತಿರುವ ನಡುವೆ ಸಮಾಜವಾದಿ ಪಕ್ಷದ ಆರೋಪ ಉತ್ತರ ಪ್ರದೇಶ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿವೆ.



Join Whatsapp