‘ಧರ್ಮ ಸಂಸದ್’ನ ಹೇಳಿಕೆ ಖಂಡನೀಯ: ಮೊದಲ ಬಾರಿಗೆ RSS ಅಂಗಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್ ನಿಂದ ಹೇಳಿಕೆ

Prasthutha|

ನವದೆಹಲಿ: ಇತ್ತೀಚೆಗೆ ಉತ್ತರಾಖಂಡದಲ್ಲಿ ನಡೆದ ‘ಧರ್ಮ ಸಂಸತ್’ ನಲ್ಲಿ ಭಾಗವಹಿಸಿದ ಕೆಲವರು ನೀಡಿರುವ ಹೇಳಿಕೆಗಳು ಯಾವುದೇ ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ ಎಂದು RSS ಅಂಗಸಂಸ್ಥೆ – ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ ಎಂ) ಹೇಳಿದೆ.

- Advertisement -

ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಮುಸ್ಲಿಮ್ ಸಮುದಾಯದ ಬೆಂಬಲವನ್ನು ಗಳಿಸಲು ಮುಸ್ಲಿಂ ಧರ್ಮಗುರುಗಳು ಮತ್ತು ವಿದ್ವಾಂಸರೊಂದಿಗೆ  ಉತ್ತರ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಜಾಗೃತಿ ಅಭಿಯಾನದಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಉತ್ತರ ಪ್ರದೇಶದ ಅಮ್ರೋಹಾ, ಮೊರಾದಾಬಾದ್ ಮತ್ತು ರಾಂಪುರ ಜಿಲ್ಲೆಗಳಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂ ಆರ್ ಎಂ)ನ 10 ಸದಸ್ಯರ ತಂಡವು ಈ ಅಭಿಯಾನವನ್ನು ನಡೆಸಿದೆ ಎಂದು ಆರ್ ಎಸ್ ಎಸ್ ಅಂಗಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಸಭೆಯಲ್ಲಿ, ಮುಸ್ಲಿಂ ಸಮಾಜದ ವಿಶೇಷವಾಗಿ  ಮಹಿಳೆಯರ ಶಿಕ್ಷಣ, ಆರೋಗ್ಯ, ಭದ್ರತೆ ಮತ್ತು ಸ್ವಾವಲಂಬನೆಗೆ ಸಂಬಂಧಿಸಿದ ವಿಷಯಗಳ ಕುರಿತು ಗಂಭೀರ ಚರ್ಚೆಗಳನ್ನು ನಡೆಸಲಾಯಿತು ಎಂದು M R M  ಹೇಳಿದೆ.

ಇತ್ತೀಚೆಗೆ ಉತ್ತರಾಖಂಡದಲ್ಲಿ ನಡೆದ ‘ಧರ್ಮ ಸಂಸದ್’ ನಲ್ಲಿ ಭಾಗವಹಿಸಿದ ಕೆಲವರು ಮಾಡಿದ ಟೀಕೆಗಳನ್ನು ಉಲ್ಲೇಖಿಸಿ “ಸರ್ಕಾರ ಅಥವಾ ಸಂಘವು ಧರ್ಮ ಸಂಸತ್ ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಎಂ ಆರ್ ಎಂ  ಅಂತಹ ಜನರನ್ನು ಬೆಂಬಲಿಸುವುದಿಲ್ಲ  ಮತ್ತು ಅವರ ಹೇಳಿಕೆಗಳನ್ನು ಸಂಘವು ಬಲವಾಗಿ ಖಂಡಿಸುತ್ತದೆ” ಎಂದು ಎಂಡಿ ಅಖ್ತರ್ ಸ್ಪಷ್ಟಪಡಿಸಿದ್ದಾರೆ

 ಆರ್ ಎಸ್ ಎಸ್ ನ ಮುಸ್ಲಿಂ ವಿಭಾಗವು ಇತ್ತೀಚೆಗೆ ಬಿಡುಗಡೆ ಮಾಡಿದ ವಿನಂತಿ ಪತ್ರದಲ್ಲಿ,  ಮುಸ್ಲಿಮರು ಭಾರತದಲ್ಲಿ “ಅತ್ಯಂತ ಸುರಕ್ಷಿತರು  ಮತ್ತು ಸಂತೋಷದಿಂದ ಇದ್ದಾರೆ”. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮನವಿ ಮಾಡಿದೆ.

ಸಭೆಯಲ್ಲಿ  ರಾಷ್ಟ್ರೀಯ ಸಂಚಾಲಕ ಎಂ.ಡಿ. ಅಖ್ತರ್, ಸಂಘಟನೆಯ ಮದ್ರಸಾ ಸೆಲ್ ಮುಖ್ಯಸ್ಥ ಮಜಹರ್ ಖಾನ್ ಮತ್ತು ಉತ್ತರಾಖಂಡ್ ಮದ್ರಸಾ ಮಂಡಳಿಯ ಅಧ್ಯಕ್ಷ ಬಿಲಾಲುರ್ರಹ್ಮಾನ್ ಭಾಗವಹಿಸಿದ್ದರು.



Join Whatsapp