ಉಳ್ಳಾಲ: ಕಾರು ಚಾಲಕನ ಪ್ರಾಣ ಉಳಿಸಲು ಹೋದ ಭಾರೀ ಗಾತ್ರದ ಟ್ರಕ್ ಕಮರಿಗೆ ಉರುಳಿ, ಹೆದ್ದಾರಿ ಸಂಚಾರ ವ್ಯತ್ಯಯಗೊಂಡ ಘಟನೆ ಮಂಗಳೂರಿನ ತೊಕ್ಕೊಟ್ಟು ಕಾಪಿಕಾಡು ಎಂಬಲ್ಲಿ ನಡೆದಿದೆ.
ಇಂದು ಬೆಳಗ್ಗೆ 7 ಗಂಟೆ ಹೊತ್ತಿಗೆ ಘಟನೆ ನಡೆದಿದ್ದು, ಪುಣೆಯಿಂದ ಕೇರಳದ ಕಾಸರಗೋಡಿಗೆ ಟಾಟಾ ಹುಂಡೈ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಭಾರೀ ಗಾತ್ರದ ಟ್ರಕ್ ಕಾಪಿಕಾಡು ಸಮೀಪ ರಸ್ತೆ ಬದಿಗೆ ಉರುಳಿದೆ. ಕಾಪಿಕಾಡು ಎರಡನೇ ಅಡ್ಡ ರಸ್ತೆ ನಿವಾಸಿ ಆಲ್ಫ್ರೆಡ್ ಗಾಡ್ ಫ್ರೀ ಡಿಸೋಜ ಎಂಬವರು ಬ್ರೀಝ ಕಾರು ಚಲಾಯಿಸುತ್ತಿದ್ದರು. ಕಾಪಿಕಾಡು ಎರಡನೇ ಅಡ್ಡ ರಸ್ತೆ ಬರುತ್ತಿದ್ದಂತೆ ಆಲ್ಪ್ರೆಡ್ ಅವರು ಯಾವುದೇ ಸೂಚನೆ ನೀಡದೆ ಅಚಾನಕ್ಕಾಗಿ ಕಾರನ್ನ ತಿರುಗಿಸಿದ್ದಾರೆ. ಇದರಿಂದ ವಿಚಲಿತನಾದ ಹಿಂಬದಿ ಇದ್ದ ಟ್ರಕ್ ಚಾಲಕ ಬಿಹಾರ ಮೂಲದ ರಮೇಶ್ ಕಾರನ್ನು ರಕ್ಷಿಸಲು ಹೋಗಿ ಟ್ರಕ್ಕನ್ನೇ ಕಮರಿಗೆ ಹಾಕಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.