ನವಜಾತ ಶಿಶುವಿನ ಅಳುವ ಶಬ್ದಕ್ಕೆ ಕೋಮಾದಿಂದ ಹೊರಬಂದ ತಾಯಿ !

Prasthutha|

ಹೈದರಾಬಾದ್: ಗರ್ಭಿಣಿಯೊಬ್ಬರು ಕೋಮಾ ಸ್ಥಿತಿ ತಲುಪಿದ್ದು, ಆಕೆಯ ಮಗುವನ್ನು ರಕ್ಷಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರ ತೆಗೆಯಲಾಗಿತ್ತು. ಈ ವೇಳೆ ನವಜಾತ ಶಿಶುವಿನ ಅಳಲು ತಾಯಿಯನ್ನು ಕೋಮಾದಿಂದ ಹೊರ ತಂದಿದೆ ಎಂದು ಹೇಳಲಾಗಿದೆ.

- Advertisement -

ಭದ್ರಾಚಲಂ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಹೈದರಾಬಾದ್ ನ ಕೋಟಾವರಂ ನಿವಾಸಿ ನಾಗಮಣಿ ಎಂಬವರು ಫೆಬ್ರವರಿ 4ರಂದು ಮಗುವಿಗೆ ಜನ್ಮ ನೀಡುವವರಿದ್ದರು. ರಕ್ತದೊತ್ತಡದ ಮಾತ್ರೆ ತೆಗೆಯುತ್ತಿದ್ದ ಹಿನ್ನೆಲೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನಿಟ್ಟಿನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಭದ್ರಾಚಲಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಕೆ ಹಠಾತ್ ಕೋಮಾಕ್ಕೆ ಜಾರಿದ್ದಳು. ಕರ್ತವ್ಯ ನಿರತ ವೈದ್ಯರ ಎಲ್ಲಾ ರೀತಿಯ ಪ್ರಯತ್ನದ ಹೊರತಾಗಿಯೂ ಮಹಿಳೆಗೆ ಪ್ರಜ್ಞೆ ಬಂದಿರಲಿಲ್ಲ.

ರೋಗಿಯ ಅಪಾಯಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಡಾ. ಕೋಟಿರೆಡ್ಡಿ ಮತ್ತು ಡಾ. ಪಾಲಯ್ಯ ಕನಿಷ್ಠ ಭದ್ರಾಚಲಂ ಆಸ್ಪತ್ರೆಯ ಅಧೀಕ್ಷಕ ರಾಮಕೃಷ್ಣ ಅವರ ಅನುಮತಿಯೊಂದಿಗೆ ಮಗುವನ್ನು ಉಳಿಸಲು ಮುಂದಾಗಿದ್ದರು.

- Advertisement -

ಮಹಿಳೆಯ ಮನೆಯವರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ನಡೆಸಿದ ರಾಮಕೃಷ್ಣನ್ ನೇತೃತ್ವದ ವೈದ್ಯರ ತಂಡ, ಸತತ ಪ್ರಯತ್ನದ ಬಳಿಕ ಮಗುವನ್ನು ಹೊರ ತೆಗೆದಿತ್ತು. ಈ ವೇಳೆ ತಾಯಿಗೆ ಪ್ರಜ್ಞೆ ತಪ್ಪಿತ್ತು.

ನವಜಾತು ಶಿಶು ಅಳುವುದನ್ನು ಕೇಳಿದ ತಾಯಿಗೆ ಪ್ರಜ್ಞೆ ಮರಳಿದ್ದು, ವೈದ್ಯರು ಆಶ್ಚರ್ಯಚಕಿತರಾದರು. ತಕ್ಷಣವೇ ಆಕೆಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಸದ್ಯ ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.



Join Whatsapp