ಉಡುಪಿ | ಸ್ಕಾರ್ಫ್ ವಿವಾದ: ಕಾನೂನು ಹೋರಾಟಕ್ಕೆ NSUI ನಿರ್ಧಾರ

Prasthutha|

ಉಡುಪಿ: ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ  ಬಾಲಕಿಯರ ಪರ ಕಾನೂನು ಹೋರಾಟಕ್ಕೆ NSUI ನಿರ್ಧಾರ ಮಾಡಿದೆ.

- Advertisement -

ಶುಕ್ರವಾರ ಕಾಲೇಜಿಗೆ ಭೇಟಿ ನೀಡಿದ  NSUI ನಾಯಕರು , ಈ ಸಂದರ್ಭ ಕೊರೋನಾ ಕಾರಣವೊಡ್ಡಿ ಪ್ರಾಂಶುಪಾಲರ ಗೈರಾಗಿದ್ದಕ್ಕೆ  ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಕಾರಣವನ್ನು ನೀಡಿ ಉಡುಪಿ ಸರ್ಕಾರಿ ಪದವಿ ಕಾಲೇಜ್ ಬಂದ್ ಮಾಡಲಾಗಿದ್ದು, ಆದರೆ ಅಲ್ಲಿಯೇ ಪಕ್ಕದ ಕಂಪೌಂಡ್ ನಲ್ಲಿ ಹೈಸ್ಕೂಲ್ ತರಗತಿ ನಡೆಸುತ್ತಿರುವುದಕ್ಕೆ  ನಾಯಕರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

- Advertisement -

ಅಲ್ಲದೆ, ನ್ಯಾಯಾಲಯದಲ್ಲಿ ವಿದ್ಯಾರ್ಥಿಗಳ ಪರ ರಿಟ್ ಹಾಕಲು ನಿರ್ಧಾರ ಮಾಡಲಾಯಿತು.



Join Whatsapp