ತಂದೆಯ ವಿರುದ್ಧ ಸುಳ್ಳು ದೂರು ದಾಖಲು: ಮನನೊಂದು ಆತ್ಮಹತ್ಯೆಗೆ ಶರಣಾದ ಪುತ್ರ !

Prasthutha|

ಚೆನ್ನೈ: ‘ನ್ಯಾಯಬೆಲೆ ಅಂಗಡಿ’ಯ ಮಾಲಿಕ ತನ್ನ ತಂದೆಯ ವಿರುದ್ಧ ಸುಳ್ಳು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವ ಉದ್ಯಮಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಿರುತ್ತಣಿ ಎಂಬಲ್ಲಿ ನಡದಿದೆ.

- Advertisement -

ಘಟನೆಯ ಹಿನ್ನೆಲೆ

ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡು ಸರ್ಕಾರ ‘ನ್ಯಾಯಬೆಲೆ ಅಂಗಡಿ’ಯ ಮೂಲಕ ವಿತರಿಸಿದ್ದ ‘ಉಡುಗೊರೆ ಪೊಟ್ಟಣ’ದಲ್ಲಿ ಸತ್ತ ಹಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ತಿರುತ್ತಣಿ ನಿವಾಸಿ ನಂದನ್ (70) ಎಂಬುವರು ನ್ಯಾಯಬೆಲೆ ಅಂಗಡಿಯಾತನ ಬಳಿ ತೆರಳಿ ವಿಷಯ ತಿಳಿಸಿದ್ದರು. ಆದರೆ ನಂದನ್ AIADMK ಬೆಂಬಲಿಗನಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ‘ನ್ಯಾಯಬೆಲೆ ಅಂಗಡಿ’ಯ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಸೊಸೈಟಿ ಮಾಲಿಕ ಸರವಣನ್ ಎಂಬಾತ ನಂದನ್ ವಿರುದ್ಧ ತಿರುತ್ತಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ನಂದನ್ ವಿರುದ್ಧ IPC ಕಾಯ್ದೆ 341 ಹಾಗೂ 505/2 ಅನ್ವಯ ಕೇಸು ದಾಖಲಿಸಿದ್ದರು.

- Advertisement -

ತಂದೆ ನಂದನ್ ವಿರುದ್ಧ ದೂರು ದಾಖಲಾದ ವಿಚಾರ ತಿಳಿಯುತ್ತಲೇ ಪುತ್ರ, ಯುವ ಉದ್ಯಮಿ ಕುಪ್ಪುಸ್ವಾಮಿ (30) ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಕ್ಷಣವೇ ಕುಪ್ಪುಸ್ವಾಮಿಯನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಅಮಾಯಕ ಯುವಕನ ಸಾವಿಗೆ ಕಾರಣವಾದ ಬೋಗಸ್ ದೂರಿನ ವಿರುದ್ಧ ವಿರುದ್ಧ AIADMK ಬೆಂಬಲಿಗರು ತಿರುತ್ತಣಿಯಲ್ಲಿ ಭಾರಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

AIADMK ಮುಖಂಡ, ಮಾಜಿ ಮುಖ್ಯಮಂತ್ರಿ ಟ್ವಿಟರ್’ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.



Join Whatsapp