ನೈಸ್ ರಸ್ತೆಯಲ್ಲಿ ಜ.16ರಿಂದ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ದ್ವಿಚಕ್ರ ವಾಹನ ಸಂಚಾರ ನಿಷೇಧ

Prasthutha|

ಬೆಂಗಳೂರು: ನಗರದ ಹೊರವಲಯದ ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ಅಪಘಾತ ಸುಲಿಗೆ ದರೋಡೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇದೇ ಜ. 16ರಿಂದ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ದ್ವಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ.
ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿ ಚಕ್ರವಾಹನಗಳ ಸಂಚಾರ ನಿಷೇಧಿಸಿ‌ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಡಾ.ಬಿ ಆರ್​ ರವಿಕಾಂತೇ ಗೌಡ ಅವರು ಆದೇಶ ಹೊರಡಿಸಿದ್ದಾರೆ.
ಈ ನಡುವೆ ನೈಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಸುನಿಲ್, ಹರೀಶ್ ಮತ್ತು ನವೀನ್‌ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಅರೋಪಿಗಳು ಸಂಚು ಮಾಡಿದ ನಂತರ ರಸ್ತೆ ಮಧ್ಯೆ ವಾಹನ ತಡೆದು ಚಾಕುವಿನಿಂದ ಹಲ್ಲೆ ಮಾಡುತ್ತಿದ್ದರು. ಚಾಕುವಿನಿಂದ ಹಲ್ಲೆ ಮಾಡಿದ ಬಳಿಕ ಅರೋಪಿಗಳನ್ನು ನಗ, ನಾಣ್ಯ ದೋಚುತಿದ್ದರು. ಕಳೆದ ವಾರ ಇಂತಹುದೇ ಹಲ್ಲೆ ಮತ್ತು ಸುಲಿಗೆ ನಡೆದಿತ್ತು. ನಾಯಂಡಹಳ್ಳಿಯಲ್ಲಿ ಒರ್ವ ಅರೋಪಿ ಕ್ಯಾಂಟರ್ ಹತ್ತಿದ್ದ. ಬಳಿಕ ದಾರಿ ಮಧ್ಯೆ ಮತ್ತೆ ಮೂವರು ಅರೋಪಿಗಳು ಕ್ಯಾಟರ್ ಹತ್ತಿದ್ದರು. ಅದಾದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಹಾಗು ಹಣ ದೋಚಿದ್ದರು.



Join Whatsapp