DCM ಕಾರು ತಡೆದು ಬಲವಂತವಾಗಿ ‘ಮೋದಿ ಝಿಂದಾಬಾದ್’ ಘೋಷಣೆ ಕೂಗಿಸಿದ ಬಿಜೆಪಿ ಕಾರ್ಯಕರ್ತರು!

Prasthutha|

ಅಮೃತಸರ: ಪಂಜಾಬ್ ಉಪಮುಖ್ಯಮಂತ್ರಿ ಒ.ಪಿ. ಸೋನಿ ಕಾರನ್ನು ತಡೆದ ಬಿಜೆಪಿ ಕಾರ್ಯಕರ್ತರು ‘ಮೋದಿ ಝಿಂದಾಬಾದ್’ ಎಂದು ಘೋಷಣೆ ಕೂಗಲು ಬಲವಂತಪಡಿಸಿದ ಘಟನೆ ನಡೆದಿದೆ.

- Advertisement -

‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಕಾರನ್ನು ತಡೆದು ನಿಲ್ಲಿಸಿದ ಬಿಜೆಪಿ ಕಾರ್ಯಕರ್ತರು, ಸೋನಿ ಅವರು ಕಾರಿನಿಂದ ಇಳಿದು ‘ಮೋದಿ ಝಿಂದಾಬಾದ್’ ಎಂದು ಹೇಳುವವರೆಗೂ ವಾಹನವನ್ನು ಮುಂದೆ ಸಾಗಲು ಅನುಮತಿಸಲಿಲ್ಲ.

ಪಂಜಾಬ್ ಪತ್ರಕರ್ತ ಗಗನ್‌ ದೀಪ್ ಸಿಂಗ್ ಟ್ವೀಟ್ ಮಾಡಿದ ವೀಡಿಯೋದಲ್ಲಿ ಭಾರೀ ಮಳೆಯ ನಡುವೆಯೂ ಉಪಮುಖ್ಯಮಂತ್ರಿ ಅವರ ಕಾರಿನ ಸುತ್ತಲೂ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಾ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತಿರುವುದು ಮತ್ತು ‘ಮೋದಿ ಝಿಂದಾಬಾದ್’ ಎಂದು ಘೋಷಣೆ ಕೂಗಲು ಒತ್ತಾಯಿಸುವುದನ್ನು ಕಾಣಬಹುದು.

- Advertisement -

ಕೊನೆಗೆ ಕಾರಿನಿಂದ ಇಳಿದು ಉಪಮುಖ್ಯಮಂತ್ರಿ ಸೋನಿ ಅವರು ‘ಮೋದಿ ಝಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ.

ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತರು ತಡೆದಿದ್ದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಉಪಮುಖ್ಯಮಂತ್ರಿಯವರನ್ನು ತಡೆಯುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.



Join Whatsapp