ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬರುವುದು ಕಲಿಕೆಗೆ ಪೂರಕವಲ್ಲ : ಮಂಗಳೂರು ವಿವಿ ಉಪ ಕುಲಪತಿ ಪ್ರೊ. ಯಡಪಡಿತ್ತಾಯ

Prasthutha|

ಮಂಗಳೂರು: ಒಂಬತ್ತನೇ ಕುಲಪತಿಯಾಗಿ ಎರಡು ವರುಷ ಏಳು ತಿಂಗಳು ಮುಗಿಸಿದ್ದೇನೆ. ಇನ್ನು ನನ್ನ ಅಧಿಕಾರಾವಧಿ 17 ತಿಂಗಳು ಇದೆ. ಇಷ್ಟು ದಿನ ಏನು ಸುಧಾರಣೆ ನಡೆಸಿದ್ದೇನೆ ಎಂಬುದನ್ನು ವಿವರಿಸಲು ಈ ಪತ್ರಿಕಾಗೋಷ್ಠಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಯಡಪಡಿತ್ತಾಯ ಹೇಳಿದರು. ಕೋವಿಡ್‌ ತಂದ ಪಾಠ ಕಡಿತ, ಸಮಯದ ಸಮಸ್ಯೆಯು ನಮ್ಮಲ್ಲಿ ಸುಧಾರಣೆ ತರಲೇಬೇಕಾದ ಸಮಯ ತಂದಿದೆ ಎಂದರು.
ಭಾರತವು ಸಾವಿರ ಕಂಬಗಳ ಜಾತ್ಯಾತೀತ ಚಪ್ಪರ. ಉಡುಪಿಯ ಕಾಲೇಜೊಂದರಲ್ಲಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಬಂದಿರುವುದು ಕಲಿಕೆಗೆ ಪೂರಕವಲ್ಲ. ಕಾಲೇಜಿಗೆ ಕಲಿಯಲು ಬರುವವರು ಶಾಂತಿ ಕಾಪಾಡಿ, ಕಲಿಯುವುದೇ ಮುಖ್ಯ ಎಂಬುದನ್ನು ತಿಳಿದಿರಬೇಕು. ಕಾಲೇಜಿಗೂ ಸಮವಸ್ತ್ರ ರೂಪಿಸಬಹುದು. ಈಗ ಹಾಗಿಲ್ಲವಾದ್ದರಿಂದ ಬಟ್ಟೆ ಯಾವುದೇ ಹಾಕಿಕೊಂಡು ಬರಲು ತಡೆಯಿಲ್ಲ. ಆದರೆ ಶಿಸ್ತು ಮುರಿಯುವುದು ಸರಿಯಲ್ಲ ಎಂದು ತಿಳಿಸಲು ಅವಕಾಶವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರೊ. ಯಡಪಡಿತ್ತಾಯ ಉತ್ತರಿಸಿದರು.

- Advertisement -

ಪರೀಕ್ಷಾಂಗ ಕುಲಸಚಿವ ಪ್ರೊ. ಪಿ. ಎಲ್. ಧರ್ಮಾ ಅವರು ಮಾತನಾಡಿ ನಾವೇ ನಮ್ಮದೇ ಓಪನ್ ಹೌಸ್ ಸಾಫ್ಟ್‌ವೇರ್ ತಯಾರಿಸಿ ಇಂದಿನ ಕಾಲಮಾನಕ್ಕೆ ತಕ್ಕಂತೆ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ. ಎಲ್ಲ ವಿವಿಗಳು ಇನ್ನು ಮುಂದೆ ಎಂಯುಲಿನ್ಕ್ಸ್ ಸಾಫ್ಟ್‌ವೇರ್ ಮೂಲಕವೇ ಪರೀಕ್ಷೆ ನಡೆಸಲಿವೆ. ಈ ವರುಷದ ಮುಂದಿನ ಪರೀಕ್ಷೆ ಈ ಸಾಫ್ಟ್‌ವೇರ್ ಮೂಲಕವೇ ನಡೆಯುತ್ತದೆ ಧರ್ಮಾ ತಿಳಿಸಿದರು.

ಪರೀಕ್ಷೆ ಮತ್ತು ಫಲಿತಾಂಶದಲ್ಲಿ ಯಾವುದೇ ತಡವಾಗುವುದನ್ನು ತಡೆಯಲು ನಾವೆಲ್ಲ ಸಂಯುಕ್ತ ಯತ್ನ ನಡೆಸಿ ಸಫಲರಾಗಿದ್ದೇವೆ. ನಫಾಸಾದವರಿಗೆ ಮರು ಪರೀಕ್ಷೆಯ ಅವಕಾಶ ನೀಡಿ ಸೆಮಿಸ್ಟರ್ ಮುಗಿಸಲು ಅವಕಾಶ ನೀಡಿದೆ. ಮಾರ್ಚ್ ಪರೀಕ್ಷೆಯನ್ನು ಈ ಬಾರಿ ಕಾಲಮಿತಿಯಲ್ಲಿ ನಡೆಸಲು ಮಂಗಳೂರು ವಿವಿ ಸರ್ವ ಸಜ್ಜಾಗಿದೆ ಎಂದು ಅವರು ತಿಳಿಸಿದರು. ಫೋನ್ ವಿಚಾರಣೆಗೆ ಈಗ ಹೊಸದಾಗಿ ಅನುಮತಿಸಲಾಗಿದೆ. ನಮ್ಮದೇ ಪರೀಕ್ಷಾ ಸಂಬಂಧಿ ಹೊಸ ವೆಬ್ ಸೈಟ್ ಬರಲಿದ್ದು ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು.

- Advertisement -

ಕೇರಳ ವಿದ್ಯಾರ್ಥಿಗಳಿಗೆ ಕೊರೋನಾ ಕಾಲದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಬೇಕಾಯಿತು. ಮುಂದೆ ಅಂಥ ಸ್ಥಿತಿ ಬಾರದಂತೆ ನೋಡಲಾಗುತ್ತದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಕಿಶೋರ್ ಕುಮಾರ್ ಮತ್ತು ಹಣಕಾಸು ವಿಭಾಗದ ನಾರಾಯಣ ಅವರುಗಳು ಉಪಸ್ಥಿತರಿದ್ದರು.



Join Whatsapp