ಕಾಂಗ್ರೆಸ್​​ ಮ್ಯಾರಥಾನ್​ ನಲ್ಲಿ ಕಾಲ್ತುಳಿತ: ಜಿಲ್ಲಾಧ್ಯಕ್ಷನ ವಿರುದ್ಧ ಕೇಸು ದಾಖಲು

Prasthutha|

- Advertisement -

ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಮಹಿಳಾ ಮ್ಯಾರಥಾನ್’ನಲ್ಲಿ ಕಾಲ್ತುಳಿತದ ಉಂಟಾಗಿ ಅನೇಕ ಬಾಲಕಿಯರು ಗಾಯಗೊಂಡ ಘಟನೆ ‌ನಡೆದಿದ್ದು, ಈ ಹಿನ್ನೆಲೆ ಪಕ್ಷದ ಜಿಲ್ಲಾಧ್ಯಕ್ಷ ಅಶ್ಫಾಕ್ ಸಕ್ಲೇನಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂಬರುವ 2022 ರ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ ಪಕ್ಷವು ಮಂಗಳವಾರ ಬರೇಲಿಯ ಬಿಷಪ್ ಮಂಡಲ್ ಇಂಟರ್ ಕಾಲೇಜಿನಲ್ಲಿ ‘ಲಡಕಿ ಹೂಂ, ಲಡ್‌ ಸಕ್ತಿ ಹೂಂ’ (ನಾನು ಹುಡುಗಿ, ನಾನು ಹೋರಾಡಬಲ್ಲೆ) ಹೆಸರಿನಲ್ಲಿ ಬಾಲಕಿಯರ ಮ್ಯಾರಾಥಾನ್‌ ಹಮ್ಮಿಕೊಂಡಿತ್ತು

- Advertisement -

ಈ ಕಾರ್ಯಕ್ರಮದಲ್ಲಿ ದಿಢೀರ್‌ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿತ್ತು. ಈ ವೇಳೆ ಅನೇಕ ಬಾಲಕಿಯರು ಗಾಯಗೊಂಡಿದ್ದರು.



Join Whatsapp