ಬರೋಬ್ಬರಿ 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು!

Prasthutha|

ಚಿಕ್ಕಮಗಳೂರು:  ತಾಯಿಯಿಂದ ದೂರವಾಗಿದ್ದ ಮಗಳು ಬರೋಬ್ಬರಿ 22 ವರ್ಷದ ಬಳಿಕ ತಾಯಿಯ ಮಡಿಲು ಸೇರಿದ ಅಪರೂಪದ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ.

- Advertisement -

ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದ ಅಂಜಲಿ 9ನೇ ವಯಸ್ಸಲ್ಲಿ ನಾಪತ್ತೆಯಾಗಿದ್ದು, ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಳಿಕ ಕೇರಳದ ನೆಲ್ಲಮಣಿಯ ಸಾಜಿ ಎಂಬವರೊಂದಿಗೆ ವಿವಾಹವಾಗಿದ್ದರು.

ಕಳೆದ 3 ವರ್ಷದಿಂದ ಅಂಜಲಿ ಅವರು ಪತಿಯೊಂದಿಗೆ ಸೇರಿ ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕೊನೆಗೂ ಮೂಡಿಗೆರೆಯ ಮುದ್ರೆ ಮನೆಯಲ್ಲಿ‌ ಅಂಜಲಿ ತಾಯಿ ಪತ್ತೆಯಾಗಿದ್ದಾರೆ.

Join Whatsapp