ಚೀನಾದಿಂದ ಲಡಾಖ್ ನಲ್ಲಿ ಸೇತುವೆ ನಿರ್ಮಾಣ !

Prasthutha|

ಲಡಾಖ್: ಲಡಾಖ್‌ ನ ಪಾಂಗಾಂಗ್ ಸರೋವರದ ಮೇಲೆ ಚೀನಾ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ಭೂ-ಗುಪ್ತಚರ ತಜ್ಞ ಡೇಮಿಯನ್ ಸೈಮನ್ ಅವರ ಉಪಗ್ರಹ ಚಿತ್ರಗಳು ಸೂಚಿಸುತ್ತಿವೆ ಎಂದು ವರದಿಯಾಗಿದೆ.

- Advertisement -

ಚೀನಾದ ಭೂಪ್ರದೇಶದೊಳಗೆ ಬರುವ ಸರೋವರದ ಒಂದು ಭಾಗಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಯು ಸರೋವರದ ಎರಡೂ ದಡಗಳನ್ನು ಸಂಪರ್ಕಿಸುತ್ತದೆ ಮತ್ತು ಚೀನಾಕ್ಕೆ ಸೈನಿಕರು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ಚಲಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಸೈಮನ್ ಅವರ ಟ್ವೀಟ್ ಚಿತ್ರದ ಪ್ರಕಾರ ಸರೋವರದ ಕಿರಿದಾದ ಭಾಗದಲ್ಲಿ ಸೇತುವೆಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ ಎಂದು ತೋರಿಸುತ್ತದೆ. ಈ ಸೇತುವೆಯನ್ನು ಪೂರ್ಣಗೊಳಿಸುವುದರೊಂದಿಗೆ ವಿವಾದಾತ್ಮಕ ಪ್ರದೇಶಕ್ಕೆ ಹೆಚ್ಚುವರಿ ಸೈನಿಕರನ್ನು ಸೇರಿಸಲು ಚೀನಾವು ಬಹು ಮಾರ್ಗಗಳನ್ನು ಹೊಂದಿದಂತಾಗುತ್ತದೆ.

- Advertisement -

2020 ರಿಂದ ಭಾರತ ಮತ್ತು ಚೀನಾದಿಂದ 50,000 ಕ್ಕೂ ಹೆಚ್ಚು ಸೈನಿಕರನ್ನು ಪೂರ್ವ ಲಡಾಖ್‌ ನಲ್ಲಿ ಡೆಪ್ಸಾಂಗ್ ಬಯಲು ಪ್ರದೇಶದಿಂದ ಉತ್ತರಕ್ಕೆ ಮತ್ತು ಡೆಮ್‌ ಚೋಕ್ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.



Join Whatsapp