ಸೌದಿ ಅರೇಬಿಯಾ: ಸಂಜ್ಞೆಯಿಲ್ಲದೆ ಪಥ ಬದಲಾಯಿಸುವ ವಾಹನ ಸವಾರರನ್ನು ಪತ್ತೆಹಚ್ಚಲು ಸ್ವಯಂಚಾಲಿತ ವ್ಯವಸ್ಥೆ

Prasthutha|

ಜಿದ್ದಾ: ಸಿಗ್ನಲ್  ನೀಡದೆ ಪಥ (Lane) ಬದಲಾಯಿಸುವ ಮೂಲಕ ಸಾರಿಗೆ ನಿಯಮ ಉಲ್ಲಂಘನೆ ಮಾಡುವುದನ್ನು ಸ್ವಯಂಚಾಲಿತವಾಗಿ ನಿಗಾವಣೆ ಮಾಡುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸೌದಿ ಅರೇಬಿಯಾದ ಸಂಚಾರಿ ನಿರ್ದೇಶನಾಲಯ ನಿನ್ನೆ ಪ್ರಕಟಿಸಿರುವುದಾಗಿ ‘ಸೌದಿ ಗಝೆಟ್’ ವರದಿ ಮಾಡಿದೆ.

- Advertisement -

7 ದಿನಗಳ ಬಳಿಕ ರಿಯಾದ್, ಜಿದ್ದಾ ಮತ್ತು ದಮ್ಮಾಮ್ ಗಳಲ್ಲಿ ಈ ಹೊಸ ಸಾರಿಗೆ ನಿಯಮಗಳು ಅನುಷ್ಠಾನಕ್ಕೆ ಬರಲಿದೆ. ಸಾರಿಗೆ ಸುರಕ್ಷಾ ಕ್ರಮವನ್ನು ಬಲಪಡಿಸುವ ಭಾಗವಾಗಿ ಈ ಹೊಸ ಪ್ರಯತ್ನ ಎಂಬುದಾಗಿ ನಿರ್ದೇಶನಾಲಯವು ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಈ ವರ್ಷದ ಆರಂಭದಲ್ಲಿ, ಕೆಂಪು ಸಿಗ್ನಲ್ ಗಳಲ್ಲಿ ಮತ್ತು ತಪ್ಪು ದಿಕ್ಕುಗಳಲ್ಲಿ ವಾಹನ ಚಲಾಯಿಸುವುದು ಮುಂತಾದ ಸಾರಿಗೆ ಅಪರಾಧಗಳಿಗೆ 6000 ಸೌದಿ ರಿಯಾಲ್ ಗರಿಷ್ಠ ದಂಡವನ್ನು ಸಂಚಾರಿ ನಿರ್ದೇಶನಾಲಯ ಪರಿಚಯಿಸಿತ್ತು.  ಈ ವರ್ಷದ ಜನವರಿಯಲ್ಲಿ ಜಾರಿಗೆ ಬಂದ ಹೊಸ ಸಾರಿಗೆ ಕಾನೂನಿನ ಕಾರ್ಯನಿರ್ವಾಹಕ ನಿಯಮಗಳ ಪ್ರಕಾರ ತಪ್ಪು ಸಂಖ್ಯಾ ಫಲಕಗಳನ್ನು ಬಳಸುವ ವಾಹನ ಸವಾರರಿಗೆ 10000 ಸೌದಿ ರಿಯಾಲ್ ದಂಡವನ್ನು ವಿಧಿಸಲಾಗುತ್ತಿತ್ತು. ಆದರೆ ತಪ್ಪು ಸಂಖ್ಯಾಫಲಕಗಳನ್ನು ಹೊಂದಿದ ಸವಾರರಿಗೆ 5000 ಸೌದಿ ರಿಯಾಲ್ ದಂಡವಾಗಿದೆ ಮತ್ತು ಗರಿಷ್ಠ 10000 ಸೌದಿ ರಿಯಾಲ್ ಆಗಿರಲಿದೆ ಎಂದು ನಿರ್ದೇಶನಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ಮಾನ್ಯ ವಿಮೆ ಹೊಂದಿರದ ವಾಹನಗಳಿಗೆ 100 ರಿಂದ 150 ಸೌದಿ ರಿಯಾಲ್ ದಂಡ, ಮಕ್ಕಳಿಗೆ ಸುರಕ್ಷಾ ಸೀಟುಗಳನ್ನು ಹೊಂದದವರಿಗೆ 300ರಿಂದ 500 ಸೌದಿ ರಿಯಾಲ್ ದಂಡ ವಿಧಿಸಲಾಗುತ್ತದೆ.

- Advertisement -

ಸಾರ್ವಜನಿಕ ರಸ್ತೆಗಳಲ್ಲಿ 20 ಮೀಟರ್ ಗೂ ಹೆಚ್ಚು ಹಿಮ್ಮುಖವಾಗಿ ಚಲಸಿದರೆ (Reverse)  150ರಿಂದ 300 ಸೌದಿ ರಿಯಾಲ್ ದಂಡ ವಿಧಿಸಲಾಗುವುದು. ಅದೇ ವೇಳೆ ವಾಹನದಿಂದ ಹೊರಗೆ ಕಸ ಬಿಸಾಡುವವರಿಗೆ 300ರಿಂದ 500 ಸೌದಿ ರಿಯಾಲ್ ದಂಡವನ್ನು ವಿಧಿಸಲಾಗುತ್ತದೆ. ವಾಹನದ ಸೌಂಡ್ ಹಾರ್ನ್ ಅನ್ನು ದುರ್ಬಳಕೆ ಮಾಡುವುದು ಕೂಡ ಉಲ್ಲಂಘನೆಯಾಗಿದ್ದು 150ರಿಂದ 300 ಸೌದಿ ರಿಯಾಲ್ ದಂಡವನ್ನು ವಿಧಿಸಲಾಗುತ್ತದೆ. ಇಂಜಿನ್ ಟರ್ನ್ ಆಫ್ ಮಾಡದೆ ವಾಹನಗಳನ್ನು ಬಿಟ್ಟು ಹೋಗುವ ಸವಾರಿಗೆ 100ರಿಂದ 150 ಸೌದಿ ರಿಯಾಲ್ ದಂಡ ವಿಧಿಸಲಾಗುತ್ತದೆ.



Join Whatsapp