ನವದೆಹಲಿ: ರುಚಿ ಮತ್ತು ವಾಸನೆಯ ನಷ್ಟವು ಕೊರೋನಾದ ಹೊಸ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳಲ್ಲಿ ವರದಿಯಾಗುತ್ತಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಒಮಿಕ್ರಾನ್ ರೂಪಾಂತರವನ್ನು ಲಘುವಾಗಿ ಪರಿಗಣಿಸಬಾರದು ಎಂದು ಭಾರತೀಯ ವೈದ್ಯಕೀಯ ಸಂಘ-ಮಹಾರಾಷ್ಟ್ರ ರಾಜ್ಯ ವಿಭಾಗದ ತಜ್ಞರು ಸ್ಪಷ್ಟವಾಗಿ ಹೇಳಿದ್ದಾರೆ. ಸಾಂಕ್ರಾಮಿಕದ ಸಮಯದಲ್ಲಿ, ವೈರಸ್ ತನ್ನ ಗುಣವನ್ನು ಬದಲಾಯಿಸುತ್ತದೆ. ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು ಮತ್ತು ಸ್ವಯಂ-ಔಷಧೋಪಾರದಲ್ಲಿ ತೊಡಗಬಾರದು. ಮಾಸ್ಕ್ ಧರಿಸುವುದು ಮತ್ತು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು. ಇದಲ್ಲದೆ, ಲಸಿಕೆ ಪಡೆಯದವರು ಕೂಡಲೇ ಲಸಿಕೆ ತೆಗೆದುಕೊಳ್ಳಬೇಕುಎಂದು ಐಎಂಎ-ಎಂಎಸ್ ಅಧ್ಯಕ್ಷ ಡಾ ಸುಹಾಸ್ ಪಿಂಗಳೆ ಶುಕ್ರವಾರ ತಿಳಿಸಿದ್ದಾರೆ.