ಧಾರವಾಡ: ಹದಿನೇಳರ ಹರೆಯದ ಬಾಲಕಿಯೊಬ್ಬಳ ಖಾಸಗಿ ವೀಡಿಯೋವೊಂದನ್ನು ತೋರಿಸಿ ಬೆದರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲಕಿಯ ಮೇಲೆ ಆರೋಪಿಗಳು ಸತತ ಮೂರು ತಿಂಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈ ಸಂಬಂಧ ಬಾಲಕಿಯ ಪೋಷಕರು ಭಾನುವಾರ ಧಾರವಾಡದ ಶಹಾರ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಬಂಧಿತ ಬಾಲಕರನ್ನು ರಿಮಾಂಡ್ ಹೋಮ್ ಗೆ ಕಳುಹಿಸಲಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಸಂತ್ರಸ್ತೆ ಬಾಲಕಿ ಆರೋಪಿಯೋರ್ವನನ್ನು ಪ್ರೀತಿಸುತ್ತಿದ್ದು, ಖಾಸಗಿ ಕ್ಷಣಗಳನ್ನು ಇತರ ಆರೋಪಿಗಳು ವೀಡಿಯೋ ರೆಕಾರ್ಡ್ ಮಾಡಿದ್ದರು.