ಇನ್ನು ಮುಂದೆ ಆಟೋ, ಟ್ಯಾಕ್ಸಿ ಹತ್ತಲೂ 2 ಡೋಸ್‌ ಕಡ್ಡಾಯ!

Prasthutha|

ಬೆಂಗಳೂರು : ಕೋವಿಡ್ ಸೋಂಕಿನ ಹಾವಳಿ ಇದೇ ರೀತಿ ಮುಂದುವರಿದರೆ, “ಎರಡು ಡೋಸ್‌ ಲಸಿಕೆ ಕಡ್ಡಾಯ’ ನಿಯಮದ ವ್ಯಾಪ್ತಿಗೆ ಆಟೋ, ಟ್ಯಾಕ್ಸಿಗಳೂ ಒಳಪಡುವ ದಿನಗಳು ದೂರ ಇಲ್ಲ. ಇಂತಹದ್ದೊಂದು ಚಿಂತನೆ ಈಗಾ ಗಲೇ ಬಿಬಿಎಂಪಿ ಅಧಿಕಾರಿಗಳ ವಲಯದಲ್ಲಿ ನಡೆದಿದೆ.

- Advertisement -

ಮಾಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು ಮತ್ತು ಚಿತ್ರಮಂದಿರಗಳಿಗೆ ಭೇಟಿ ನೀಡುವವರಿಗೆ ಈಗಾಗಲೇ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಮುಂದುವರಿದು ಮೆಟ್ರೋ, ಬಸ್ ನಂತಹ ಸಾರ್ವಜನಿಕ ಈ ನಿಯಮ ಜಾರಿಗೊಳಿಸಲು ಬಿಬಿಎಂಪಿಯು ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಮುಂಬರುವ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಸರ್ಕಾರದ ಸೂಚನೆ ಮೇರೆಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ “ ತಿಳಿಸಿದರು.



Join Whatsapp