ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ

Prasthutha|

ಮಂಗಳೂರು: ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಮ್ಮೇಳನಕ್ಕೆ ದಕ್ಷಿಣ ಮಂಗಳೂರು ಶಾಸಕ ವೇದವ್ಯಾಸ ಕಾಮತ್  ನಗರದ ಪುರಭವನದಲ್ಲಿ ಚಾಲನೆ ನೀಡಿದರು.

- Advertisement -

ಉದ್ಘಾಟನಾ ಭಾಷಣ ಮಾಡಿದ ವೇದವ್ಯಾಸ ಕಾಮತರು, ಇದು ನನ್ನ ಭಾಗ್ಯ. ಗೃಹ ಸಚಿವರು ಕಾರ್ಯನಿಮಿತ್ತ ಬರಲಾಗದ್ದರಿಂದ ನನಗೀಗ ಉದ್ಘಾಟನಾ ಭಾಗ್ಯ ಲಭಿಸಿದೆ. ಪತ್ರಕರ್ತರು ಸಮಾಜದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ನೆರವಾಗುತ್ತಿದ್ದಾರೆ ಎಂದರು. 

ಮಂಗಳೂರು ಪೋಲೀಸು ಕಮೀಶನರ್ ಶಶಿಕುಮಾರ್ ಮಾತನಾಡಿ, ಸಂವಿಧಾನದ ನಾಲ್ಕನೆಯ ಅಂಗವಾದ ಮಾಧ್ಯಮ ಕಾರ್ಯ ನಿರ್ವಹಿಸುವ ಮಾದರಿ ಸುಧಾರಿಸಿದೆ. ನಾಡು, ನುಡಿ, ನೀರು ಮುಖ್ಯ ಎಂದರು. 

- Advertisement -

ಮೊದಲಿಗೆ ಸಂಘದ ಅಧ್ಯಕ್ಷ ಇಂದಾಜೆ ಮಾತನಾಡಿ, ಪತ್ರಕರ್ತರು ಸಮಾಜ ಮತ್ತು ಸರಕಾರದ ಕೊಂಡಿಯಾಗಿ ಕೆಲಸಯ ಮಾಡಬೇಕು ಎಂಬ ಧ್ಯೇಯವನ್ನು ನಮ್ಮ ಸಂಘಟನೆ ಹೊಂದಿದೆ. ಅದರಂತೆಯೇ ಈ ಸಮಾವೇಶ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಮನೋಹರ ಪ್ರಸಾದ್, ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp