ಭೋಪಾಲ್: ಅನಾರೋಗ್ಯದ ಕಾರಣ ನೀಡಿ ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದ ಬಿಜೆಪಿ ನಾಯಕಿ, ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ನೃತ್ಯ, ಬಾಸ್ಕೆಟ್ ಬಾಲ್ ಬಳಿಕ ಇದೀಗ ಕ್ರಿಕೆಟ್ ಆಡಿ ವಿವಾದಕ್ಕೆ ಸಿಲುಕಿದ್ದಾರೆ.
ಈ ಮೊದಲು ಬಾಸ್ಕೆಟ್ಬಾಲ್ ಆಡುತ್ತಿರುವ ಮತ್ತು ನೃತ್ಯ ಮಾಡುವ ವೀಡಿಯೋ ವೈರಲಾಗಿತ್ತು. ಇದೀಗ ಅವರು ಕ್ರಿಕೆಟ್ ಆಡುವ ದೃಶ್ಯವೂ ವಿವಾದಕ್ಕೆ ಕಾರಣವಾಗಿದೆ.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದರು. ಆರೋಗ್ಯ ಸಮಸ್ಯೆಗಳಿಂದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತನಗೆ ನಡೆಯಲು ಸಾಧ್ಯವಾಗುತ್ತಿಲ್ಲ.ಗಾಲಿಕುರ್ಚಿಯಲ್ಲಿ ಮಾತ್ರ ಪ್ರಯಾಣಿಸಬಹುದೆಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಪ್ರಜ್ಞಾ ಠಾಕೂರ್ 2008 ರ ಮಾಲೆಗಾಂವ್ ಭಯೋತ್ಪಾದಕ ಸ್ಫೋಟದ ಪ್ರಮುಖ ಆರೋಪಿಯಾಗಿದ್ದಾರೆ. ಜಾಮೀನು ಪಡೆಯುವ ಮೊದಲು ಅವರು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದರು.