ಸೌದಿ ಅರೇಬಿಯಾ: ಡಿಸೆಂಬರ್ ನಿಂದ 6 ಲಕ್ಷ ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ವೇತನ ‘ಮುದದ್’ ಪೋರ್ಟಲ್ ಮುಖಾಂತರ ವರ್ಗಾವಣೆ

Prasthutha|

ರಿಯಾದ್: ಖಾಸಗಿ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ 6 ಲಕ್ಷ ಸಂಸ್ಥೆಗಳನ್ನು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ‘ಮುದದ್’ ವೇದಿಕೆಯಡಿ ತರಲಾಗುವುದು ಎಂದು  ತಪಾಸಣೆ ಮತ್ತು ಕೆಲಸದ ವಾತಾವರಣ ಅಭಿವೃದ್ಧಿಗಾಗಿ ಇರುವ ಈ ಸಚಿವಾಲಯದ ಉಪ ಮಂತ್ರಿ ಸತ್ತಾಮ್ ಅಲ್ ಹರ್ಬಿ ತಿಳಿಸಿದ್ದಾರೆ.

- Advertisement -

ಈ ವೇದಿಕೆಯು ವೇತನದಾರರ ನಿರ್ವಹಣಾ ಸೇವೆಯನ್ನು ಒದಗಿಸಲಿದ್ದು ಆಡಳಿತಾತ್ಮಕ ದರಗಳನ್ನು ಕಡಿತಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಐದು ಅಥವಾ ಹೆಚ್ಚು ಕಾರ್ಮಿಕರಿರುವ 2 ಲಕ್ಷ ಸಂಸ್ಥೆಗಳನ್ನು ಮುದಾದ್ ವೇದಿಕೆ ಒಳಗೊಂಡಿದೆ. ಇನ್ನೂ 4 ಲಕ್ಷ ಸಂಸ್ಥೆಗಳು ಖಾಸಗಿ ವಲಯದಲ್ಲಿದ್ದು ಅವುಗಳು ಡಿಸೆಂಬರ್ 1ರಂದು ಸೇರ್ಪಡೆಯಾಗಲಿದೆ.
“ಈ ಖಾಸಗಿ ಕಂಪೆನಿಗಳ ಕಾರ್ಮಿಕರ ಎಲ್ಲಾ ವೇತನಗಳು ಈ ವೇದಿಕೆಯ ಮೂಲಕ ವರ್ಗಾವಣೆಗೊಳ್ಳಲಿದೆ” ಎಂದು ಅವರು ಹೇಳಿದ್ದಾರೆ. ಈ ವ್ಯವಸ್ಥೆಯಿಂದಾಗಿ ಕಾರ್ಮಿಕ ಮಾರುಕಟ್ಟೆಯ ದಕ್ಷತೆ ಹೆಚ್ಚಲಿದೆ ಮತ್ತು ಕಾರ್ಮಿಕ ವಿವಾದಗಳು ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಅಲ್ ಅರಬಿಯಾ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ಅಲ್ ಹರ್ಬಿ, ವೇತನ ರಕ್ಷಣೆಗಾಗಿ ಕಳೆದ ಎರಡು ವರ್ಷಗಳಿಂದ ಮುದಾದ್ ವೇದಿಕೆಯು ಕಾರ್ಯಾಚರಿಸುತ್ತಿದ್ದು, ಹಲವು ಸರಕಾರಿ ಏಜೆನ್ಸಿಗಳು ಇದನ್ನು ಬಳಸುತ್ತಿವೆ ಎಂದಿದ್ದಾರೆ.

ಕಾರ್ಮಿಕ ಮಾರುಕಟ್ಟೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಈ ವೇದಿಕೆ ಹೊಂದಿದೆ ಮತ್ತು  ನಾಗರಿಕರಿಗೆ ಖಾಸಗಿ ವಲಯವನ್ನು ಆಕರ್ಷಕಗೊಳಿಸಲಿದೆ ಬ್ಯಾಂಕಿಂಗ್ ವಲಯದೊಂದಿಗೆ ಈ ವೇದಿಕೆಯನ್ನು ಜೋಡಿಸುವುದರಿಂದ ವೇಗದ ವಿಚಕ್ಷಣೆ ಮತ್ತು ಸುಲಭ ಕಾರ್ಯವಿಧಾನವನ್ನು ಸಾಧಿಸಬಹುದಾಗಿದೆ. ಸಂಸ್ಥೆಯ ಮಾಲೀಕ ವೇತನಗಳನ್ನು ಬ್ಯಾಂಕ್ ಮೂಲಕ ವರ್ಗಾಯಿಸುವುದರಿಂದ ಈ ವೇದಿಕೆಯು ನೇರವಾಗಿ ಸಂಸ್ಥೆಯ ಬದ್ಧತೆಯ ಮೇಲೆ ನಿಗಾ ಇಡಲಿದೆ” ಎಂದು ಅಲ್ ಹರ್ಬಿ ತಿಳಿಸಿದ್ದಾರೆ.



Join Whatsapp