ನಗರಸಭೆ ಚುನಾವಣೆಗೆ ಎರಡು ದಿನ ಇರುವಾಗಲೇ ಅಭ್ಯರ್ಥಿ ನಿಧನ

Prasthutha|

ಶಿರಾ: ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ 72 ವರ್ಷದ ಚಾಂದ್ ಪಾಷ ಹೃದಯಾಘಾತದಿಂದ ನಿಧನರಾಗಿದ್ದಾರೆ.

- Advertisement -

ಡಿ.27ರಂದು ನಡೆಯುವ ಶಿರಾ ನಗರಸಭೆ ಚುನಾವಣೆಯಲ್ಲಿ 21ನೇ ವಾರ್ಡ್‌ನಿಂದ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದರು.

ಜಾಮಿಯಾ ಮಸೀದಿಯ ಇಮಾಮರಾಗಿ ಸೇವೆ ಸಲ್ಲಿಸುತ್ತಿದ್ದ ಚಾಂದ್ ಪಾಷ , ಶಿರಾ ನಗರಸಭೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ನಟರಾಜ್ ಬೀಡಿ ಮಾಲೀಕರಾಗಿದ್ದಾರೆ. ಆರ್.ರೆಹಾನ್ ಶಿಕ್ಷಣ ಸಂಸ್ಥೆಯ ಮೂಲಕ ಜನಪರ ಸೇವೆ ಮಾಡುತ್ತಿದ್ದರು.

Join Whatsapp