ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ ಸಮೀಪದ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದ ಹಲವು ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಇಂದು ತೆರವುಗೊಳಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸುವ ಯೋಜನೆಯ ಭಾಗವಾಗಿ ಹಲವಾರು ಸಣ್ಣಪುಟ್ಟ ಗೂಡಂಗಡಿ ಮತ್ತು ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಸದ್ಯ ಚಾಲ್ತಿಯಲ್ಲಿ ಈ ಯೋಜನೆಯು 2024 – 25 ರ ಸಾಲಿನಲ್ಲಿ ಪೂರ್ತಿಯಾಗಲಿದ್ದು, ಇದು ನಗರದ ಸ್ವರೂಪವನ್ನೇ ಬದಲಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ನಗರದಾದ್ಯಂತ ಮೂಲಸೌಕರ್ಯ, ಸ್ವಚ್ಛತೆ ಮತ್ತು ಸುಸ್ಥಿರ ಪರಿಸರದ ನಿರ್ಮಾಣಕ್ಕೆ ಉತ್ತೇಜನ ಮತ್ತು ನಾಗರಿಕರಿಗೆ ಗುಣಮಟ್ಟದ ಜೀವನವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ರಾಜ್ಯದ ಇತರ ನಗರಗಳಿಗೆ ಹೋಲಿಸಿದಾಗ ಮಂಗಳೂರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿದೆ.