ಕೊರೋನಾ ಲಸಿಕೆ ಹಾಕಿಸಿಕೊಳ್ಳದ ಸರ್ಕಾರಿ ನೌಕರರಿಗೆ ಸಂಬಳವಿಲ್ಲ: ಪಂಜಾಬ್ ಸರ್ಕಾರ

Prasthutha|

ಚಂಡೀಗಢ: ಪಂಜಾಬ್ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದ್ದು, ಅದರ ಅಡಿಯಲ್ಲಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳದ ಸರ್ಕಾರಿ ನೌಕರರಿಗೆ ಅವರ ಸಂಬಳವನ್ನು ಪಾವತಿಸಲಾಗುವುದಿಲ್ಲ ಎಂದು ಹೇಳಿದೆ.ಉದ್ಯೋಗಿಗಳು ತಮ್ಮ ಸಂಬಳವನ್ನು ಪಡೆಯಲು ಪಂಜಾಬ್ ಸರ್ಕಾರದ ಜಾಬ್ ಪೋರ್ಟಲ್‌ನಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

- Advertisement -

ದೇಶಾದ್ಯಂತ ಕೊರೊನಾ ವೈರಸ್ ರೂಪಾಂತರದ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಪಂಜಾಬ್ ಸರ್ಕಾರವು ಲಸಿಕೆಯನ್ನು ಪಡೆಯಲು ಜನರನ್ನು ಉತ್ತೇಜಿಸಲು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ.ಈ ನಡುವೆ, ಕೋವಿಡ್ -19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳದ ಜನರನ್ನು ಜನವರಿ 1 ರ ನಂತರ ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿಸಲಾಗುವುದಿಲ್ಲ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಬುಧವಾರ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಇದುವರೆಗೆ ಕೊರೊನಾ ವೈರಸ್‌ನ 213 ಒಮಿಕ್ರಾನ್ ರೂಪಾಂತರದ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ದೆಹಲಿಯು 57 ದೃಢೀಕೃತ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರ (54 ಪ್ರಕರಣಗಳು) ಮತ್ತು ತೆಲಂಗಾಣ (24 ಪ್ರಕರಣಗಳು) ಎಂದು ತಿಳಿದು ಬಂದಿದೆ.



Join Whatsapp