ನಾಯಿಮರಿಗೆ ತನ್ನ ಪತ್ನಿಯ ಹೆಸರಿಟ್ಟ ಪಕ್ಕದ ಮನೆಯಾಕೆಗೆ ಬೆಂಕಿ ಹಚ್ಚಿದ ಭೂಪ !

Prasthutha|

ಗುಜರಾತ್: ತಾನು ಪ್ರೀತಿಯಿಂದ ಕರೆಯುತ್ತಿರುವ ಪತ್ನಿಯ ಹೆಸರನ್ನು, ಪಕ್ಕದ ಮನೆಯಾಕೆ ಅವರ ನಾಯಿಮರಿಗೂ ಅದೇ ಹೆಸರಿಟ್ಟ ಕಾರಣಕ್ಕೆ ಕುಪಿತಕೊಂಡ ವ್ಯಕ್ತಿಯೊಬ್ಬ ನಾಯಿಯ ಮನೆಯಾಕೆಗೆ ಬೆಂಕಿ ಹಚ್ಚಿದ ಘಟನೆ ಗುಜರಾತ್’ನ ಗಾಂಧಿನಗರದಲ್ಲಿ ನಡೆದಿದೆ.

- Advertisement -

ಆರೋಪಿ ಸುರಭಾಯ್ ಭಾರ್ವಾದ್ ಎಂಬಾತ ತನ್ನ  ಪತ್ನಿಯನ್ನು ಸೋನು ಎಂದು ಕರೆಯುತ್ತಿದ್ದ. ಇದೇ ವೇಳೆ ಸುರಭಾಯ್ ಪಕ್ಕದ ಮನೆಯ ನಿವಾಸಿಯಾಗಿರುವ ನೀತಾಬೆನ್ ಸರ್ವಿಯಾ (35) ಎಂಬಾಕೆ ತನ್ನ ನಾಯಿ ಮರಿಗೂ ಸೋನು ಎಂದು ಹೆಸರಿಟ್ಟಿದ್ದರು. ಪ್ರತನಿತ್ಯ ಸೋನು.. ಸೋನು ಎಂದು ಕರೆಯುವಾಗ ನಾಯಿ ಮರಿಯು ಬಾಲ ಅಲ್ಲಾಡಿಸಿಕೊಂಡು ನೀತಾಬೆನ್ ಬಳಿ ಬರುತ್ತಿತ್ತು. ಇದನ್ನು ನೋಡಿ ಸಿಟ್ಟು ನೆತ್ತಿಗೇರಿಸಿಕೊಂಡಿದ್ದ ಸುರಭಾಯ್, ತನ್ನ ಸ್ನೇಹಿತರ ಜೊತೆ ನೀತಾಬೆನ್ ಮನೆಗೆ ನುಗ್ಗಿ, ಹೆಸರಿನ ವಿಚಾರದಲ್ಲಿ ಗಲಾಟೆ ಮಾಡಿದ್ದಾನೆ. ಬಳಿಕ ಜಗಳವು ವಿಕೋಪಕ್ಕೆ ತಿರುಗಿ ನೀತಾಬೆನ್ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆ ನಡೆದ ವೇಳೆ ಆಕೆಯ ಪತಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

ಮೂರು ಮಕ್ಕಳ ತಾಯಿಯಾಗಿರುವ ನೀತಾಬೆನ್ ಸರ್ವಿಯಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,  ಭಾವ್’ನಗರ್ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  



Join Whatsapp