ಯೋಗಿ ಆದಿತ್ಯನಾಥ್ ‘ಉಪಯೋಗಿ’ ಅಲ್ಲ, ‘ನಿರುಪಯೋಗಿ’: ಅಖಿಲೇಶ್ ಯಾದವ್

Prasthutha|

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌’ರನ್ನು ‘ಉಪಯೋಗಿ’ ಎಂದು ಹಾಡಿ ಹೊಗಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಟಾಂಗ್ ಕೊಟ್ಟಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಯೋಗಿ ಅವರನ್ನು “ಅನುಪಯೋಗಿ” ಎಂದು ಕರೆದಿದ್ದಾರೆ.

- Advertisement -

ಗಂಗಾ ಎಕ್ಸ್ ಪ್ರೆಸ್ ವೇ ಯೋಜನೆಗೆ ಶನಿವಾರ ಶಹಜಹಾನ್‌ಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುಪಿ + ಯೋಗಿ = ಉಪಯೋಗಿ ಎಂದು ತಮ್ಮದೇ ಶೈಲಿಯಲ್ಲಿ ಯೋಗಿ ಆದಿತ್ಯನಾಥ್‌’ರನ್ನು ಹಾಡಿ ಹೊಗಳಿದ್ದರು.

ಈ ಕುರಿತು ಟ್ವಿಟರ್’ನಲ್ಲಿ ತಿರುಗೇಟು ಕೊಟ್ಟಿರುವ ಅಖಿಲೇಶ್ ಯಾದವ್, “ಹತ್ರಾಸ್‌’ನ ಪುತ್ರಿ, ಲಖಿಂಪುರದ ರೈತರು, ಗೋರಖ್‌’ಪುರದ ವ್ಯಾಪಾರಿ, ಅಸುರಕ್ಷಿತ ಭಾವನೆಯಲ್ಲಿರುವ ಮಹಿಳೆಯರು, ನಿರುದ್ಯೋಗಿ ಯುವಕರು, ದಲಿತರು ಮತ್ತು ಹಿಂದುಳಿದ ವರ್ಗದವರು ಜನಸಾಮನ್ಯರು ಪ್ರಸ್ತುತ ಸರ್ಕಾರವನ್ನು ನಿರುಪಯೋಗಿ ಅಥವಾ ಅನುಪಯೋಗಿ ಅಥವಾ ನಿಷ್ಪ್ರಯೋಜಕ ಸರ್ಕಾರವೆಂದು ಹೇಳುತ್ತಿದ್ದಾರೆ. ಉತ್ತರ ಪ್ರದೇಶಕ್ಕೆ ಬಿಜೆಪಿ ಬೇಡ ಎಂದು ಹೇಳುತ್ತಿದ್ದಾರೆ’’ ಎಂದು ಟ್ವೀಟ್ ಮಾಡಿದ್ದಾರೆ.  

- Advertisement -

ಉತ್ತರಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಮಹತ್ವದ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ನಾಯಕರ ವಾಕ್ಸಮರ, ಪರಸ್ಪರ ಕೆಸರೆರಚಾಟ ಜೋರಾಗಿದೆ.



Join Whatsapp