ಗೋಧ್ರಾ ಗಲಭೆ ಆಯೋಗದ ನೇತೃತ್ವ ವಹಿಸಿದ್ದ ನ್ಯಾಯಾಧೀಶ ಜಿ.ಟಿ. ನಾನಾವತಿ ವಿಧಿವಶ

Prasthutha|

ಹೊಸದಿಲ್ಲಿ: 2002ರ ಗೋಧ್ರಾ ಗಲಭೆ ಮತ್ತು 1984ರ ಸಿಖ್ ವಿರೋಧಿ ದಂಗೆಗಳ ತನಿಖೆಗಾಗಿ ರಚಿಸಲಾದ ಆಯೋಗಗಳ ನೇತೃತ್ವ ವಹಿಸಿದ್ದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಗಿರೀಶ್ ಠಾಕೋರ್ಲಾಲ್ ಅಲಿಯಾಸ್ ಜಿಟಿ ನಾನಾವತಿ (86) ನಿಧನರಾಗಿದ್ದಾರೆ.

- Advertisement -

1935ರ ಫೆಬ್ರವರಿ 17 ರಂದು ಜನಿಸಿದ ಅವರು 1958ರ ಫೆಬ್ರವರಿ 11 ರಂದು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಜುಲೈ 1979 ರಲ್ಲಿ ಗುಜರಾತ್ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.

ನಂತರ 1994 ರಿಂದ ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಸೆಪ್ಟೆಂಬರ್ 1994 ರಲ್ಲಿ ನ್ಯಾಯಮೂರ್ತಿ ನಾನಾವತಿ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಯಿತು. ಮಾರ್ಚ್ 1995 ರಲ್ಲಿ ಸುಪ್ರೀಂ ಕೋರ್‌್ಿನ ನ್ಯಾಯಾಧೀಶರಾಗಿ ಬಡ್ತಿ ಪಡೆದ ಅವರು ಫೆಬ್ರವರಿ 2000 ರಲ್ಲಿ ನಿವೃತ್ತರಾಗುತ್ತಾರೆ.
.



Join Whatsapp