ಕೋಯಿಕ್ಕೋಡ್: ದಿನಗೂಲಿ ಕಾರ್ಮಿಕನೋರ್ವ ಪಂಚಾಯತ್ ನ ಮಹಿಳಾ ಉದ್ಯೋಗಿಗೆ ಬೆಂಕಿಯಿಟ್ಟು, ತಾನು ಕೂಡ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿದೆ.
ಕೃಷ್ಣಪ್ರಿಯಾ (22) ಕೊಲೆಯಾದ ಯುವತಿಯಾಗಿದ್ದು, ನಂದನ್ ಕುಮಾರ್ (26) ಯುವತಿಗೆ ಬೆಂಕಿ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ ಎಂದು ಗುರುತಿಸಲಾಗಿದೆ.
ನಂದಕುಮಾರ್ ಬಹಳ ದಿನಗಳಿಂದ ಕೃಷ್ಣಪ್ರಿಯಾಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಆದರೆ ನಿನ್ನೆ ಬೆಳಿಗ್ಗೆ 9.30 ಸುಮಾರಿಗೆ ತಿಕ್ಕೋಡಿ ಪಂಚಾಯತ್ ಕಚೇರಿ ಮುಂದೆ ಕೃಷ್ಣಪ್ರಿಯಾ ಅವರನ್ನು ನಂದಕುಮಾರ್ ತಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಚೀರಾಟ ಕೇಳಿದ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿ ಯನ್ನು ನಂದಿಸಿದ್ದಾರೆ. ಬಳಿಕ ಇಬ್ಬರನ್ನು ಕೂಡ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ.