ಸೆಕ್ಸ್’ಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ !

Prasthutha|

ಮಧ್ಯಪ್ರದೇಶ: ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

- Advertisement -

ಮಧ್ಯಪ್ರದೇಶದ ಟಿಕಾಮ್’ಘರ್’ನ ರಾಮನಗರ ಎಂಬಲ್ಲಿ ಘಟನೆ ನಡೆದಿದ್ದು, ತನಗೆ ಸಮ್ಮತಿಯಿಲ್ಲದಿದ್ದರೂ, ಒತ್ತಾಯಪೂರ್ವಕವಾಗಿ ಸೆಕ್ಸ್’ಗೆ ಒತ್ತಾಯಿಸಿದ 26 ವರ್ಷದ ಪತಿಯ ಮರ್ಮಾಂಗವನ್ನೇ 24 ವರ್ಷದ ಪತ್ನಿ ಕತ್ತರಿಸಿದ್ದಾಳೆ. ಘಟನೆ ನಡೆದ ಬಳಿಕ ಆಸ್ಪತ್ರೆ ಸೇರಿದ್ದ ಪತಿರಾಯ, ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡ ಬಳಿಕ ಪತ್ನಿಯ ವಿರುದ್ಧ ಜತಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಜತಾರ ಪೊಲೀಸ್ ಠಾಣಾಧಿಕಾರಿ ತ್ರಿವೇಂದ್ರ ತ್ರಿವೇದಿ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 2019ರಲ್ಲಿ ವಿವಾಹವಾಗಿದ್ದ ಜೋಡಿ, ಪದೇ ಪದೇ ಜಗಳವಾಡುತ್ತಿದ್ದ ಕಾರಣ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಮತ್ತೆ ಒಂದೇ ಮನೆಯಲ್ಲಿ ಸಂಸಾರ ಮಾಡಲು ಆರಂಭಿಸಿದ್ದರು ಎಂದು ತ್ರಿವೇದಿ ಹೇಳಿದ್ದಾರೆ.  ಮಹಿಳೆಯ ವಿರುದ್ಧ ಐಪಿಸಿ ಕಾಯ್ದೆ 324ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.  



Join Whatsapp