ಅಕ್ಬರ್ ರಸ್ತೆಗೆ ಬಿಪಿನ್ ರಾವತ್ ಎಂದು ಮರುನಾಮಕರಣ ಮಾಡಲು ಬಿಜೆಪಿ ಒತ್ತಾಯ

Prasthutha|

►ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಬೆಂಬಲ?

- Advertisement -

ಹೊಸದಿಲ್ಲಿ: ದೆಹಲಿಯ ಅಕ್ಬರ್ ರಸ್ತೆಗೆ ದಿವಂಗತ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥರು ಒತ್ತಾಯಿಸಿದ್ದಾರೆ.

ದೆಹಲಿ ಮುನ್ಸಿಪಲ್ ಕೌನ್ಸಿಲ್‌ ಗೆ ಪತ್ರ ಬರೆದ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್, ‘ಭಾರತದ ಮೊದಲ ಸೇನಾ ಮುಖ್ಯಸ್ಥರ ಸ್ಮರಣೆಯನ್ನು ಶಾಶ್ವತಗೊಳಿಸಲು ದೆಹಲಿಯ ಅಕ್ಬರ್ ರಸ್ತೆಗೆ ಬಿಪಿನ್ ರಾವತ್ ಹೆಸರನ್ನು ಮರುನಾಮಕರಣ ಮಾಡಬೇಕು. ಇದು ಅವರಿಗೆ ನಿಜವಾದ ಶ್ರದ್ಧಾಂಜಲಿಯಾಗಬಹುದೆಂದು ನಾನು ಭಾವಿಸುತ್ತೇನೆ. ಅಕ್ಬರ್ ದೇಶದ ಮೇಲೆ ದಂಡೆತ್ತಿ ಬಂದವನಾಗಿದ್ದು, ದೇಶದ ಪ್ರಮುಖ ರಸ್ತೆಯೊಂದಕ್ಕೆ ಇಂತಹ ಅತಿಕ್ರಮಣಕಾರರ ಹೆಸರಿಡುವ ಬದಲು ಬಿಪಿನ್ ರಾವತ್ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -

ತಾನು ವೈಯಕ್ತಿಕವಾಗಿ ಈ ಅಭಿಪ್ರಾಯವನ್ನು ಬೆಂಬಲಿಸುವುದಾಗಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ಸಾಕಷ್ಟು ಬೇಡಿಕೆಗಳನ್ನು ನೋಡಿದ್ದೇನೆ. ಆದರೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಎನ್‌ಡಿಎಂಸಿಗೆ ಬಿಟ್ಟದ್ದು ಎಂದು ಉಪಾಧ್ಯಾಯ ಹೇಳಿದರು.

ಅಕ್ಬರ್ ರಸ್ತೆಗೆ ಮರುನಾಮಕರಣದ ಕೂಗು ಇದೇ ಮೊದಲಲ್ಲ. ಈ ಹಿಂದೆ ‘ಮಹಾರಾಣಾ ಪ್ರತಾಪ್ ರಸ್ತೆ’ ಎಂದು ಹೆಸರಿಡಬೇಕೆಂಬ ಬೇಡಿಕೆ ಕೇಳಿ ಬಂದಿತ್ತು.

ಹಲವು ಬಾರಿ ರಸ್ತೆಯ ಫಲಕವನ್ನು ವಿರೂಪಗೊಳಿಸಿ ನಾಶಪಡಿಸಲಾಗಿತ್ತು. ಸಂಘಪರಿವಾರದ ಕಾರ್ಯಕರ್ತರು ‘ಹೇಮು ವಿಕ್ರಮಾದಿತ್ಯ ಮಾರ್ಗ’ ಎಂಬ ಪೋಸ್ಟರ್ ಅಂಟಿಸಿ ವಿಕೃತಿ ಮೆರೆದಿದ್ದರು.



Join Whatsapp