ಜೈಪುರ ಗ್ಯಾಂಗ್ ಗೆ ಸುಪಾರಿ ಕೊಟ್ಟು ಚಿನ್ನದಂಗಡಿ ಕಳ್ಳತನ: 9 ಮಂದಿ ಬಂಧನ

Prasthutha|

ಬೆಂಗಳೂರು: ಸುಪಾರಿ ಕೊಟ್ಟು ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 9 ಮಂದಿ ಆರೋಪಿಗಳನ್ನು ಬಂಧಿಸಿದ್ದು ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ. ರಾಜೇಂದ್ರ, ಧೀರಜ್, ರವಿ, ದೇವರಾಮ್, ಡವರಲಾಲ್, ವಿನೋದ್, ಗೊವರ್ಧನ್, ಆಶೋಕ್, ಕುಮಾರ್, ದಿನೇಶ್, ಶ್ರಿರಾಮ್ ಬಂಧಿತ ಅರೋಪಿಗಳಾಗಿದ್ದಾರೆ.

- Advertisement -

ಪರಿಚಿತ ಕಳ್ಳರನ್ನು ಕರೆಸಿ ಚಿನ್ನದ ಅಂಗಡಿ ಕಳ್ಳತನ ಮಾಡಲು ಸುಪಾರಿ ಕೊಟ್ಟು ಗಣೇಶ್ ಕಾರ್ಪ್ ಗೋಲ್ಡ್ ಶಾಪ್ ನಲ್ಲಿ ಕಳ್ಳತನ ಮಾಡಿಸಿರುವುದು ಪತ್ತೆಯಾಗಿದೆ. ಆರೋಪಿ ಸುನಿಲ್ ಮಾಲಿ, ಗಣೇಶ್ ಕಾರ್ಪ್ ಗೋಲ್ಡ್ ಶಾಪ್ ನ ಮಾಲಿಕನ ಜೊತೆಗೆ ವ್ಯವಹಾರ ಮಾಡುತ್ತಿದ್ದ. ಹೀಗಾಗಿ ಆರೋಪಿ ಸುನಿಲ್ ಗೆ ಗೋಲ್ಡ್ ಶಾಪ್ ನಲ್ಲಿ ಚಿನ್ನ ಇಟ್ಟಿರುವ ಬಗ್ಗೆ ಸುಳಿವಿತ್ತು. ಇದರ ಸಹಾಯದಿಂದ ಚಿನ್ನ ಕಳ್ಳತನ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಅಮಾವಾಸ್ಯೆ ದಿನ ಗಣೇಶ್ ಕಾರ್ಪ್ ಶಾಪ್ ತೆರೆಯುವುಲ್ಲ ಎನ್ನುವುದನ್ನು ತಿಳಿದಿದ್ದ ಆರೋಪಿ ಸುನೀಲ್ ಆ ದಿನವೇ ಕಳ್ಳತನ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದ.

ಮೊದಲಿಗೆ ಕಳ್ಳತನ ಮಾಡಲು ಸುನಿಲ್ ಬೆಂಗಳೂರು ಮೂಲದ ಮೂವರು ಕಳ್ಳರನ್ನು ಸಂಪರ್ಕ ಮಾಡಿದ್ದ. ಬಳಿಕ ಸ್ಥಳೀಯ ಕಳ್ಳರು ಕಳ್ಳತನ ಮಾಡಿದರೆ ಪೊಲೀಸರಿಗೆ ಗೊತ್ತಾಗಲಿದೆ ಎಂದು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ರಾಜಸ್ಥಾನದ ಜೈಪುರ್ ಗ್ಯಾಂಗ್ ಗೆ ಸುಪಾರಿ ಕೊಟ್ಟು ಕಳ್ಳತನಕ್ಕೆ ಒಪ್ಪಿಸಿದ್ದಾನೆ.  ಕಳವು ಮಾಡಿದ ಚಿನ್ನಾಭರಣದಲ್ಲಿ ಅರ್ಧ ಸಮಾನವಾಗಿ ಹಂಚಿಕೊಳ್ಳಲು ಮಾತುಕತೆ ನಡೆದಿದೆ. ಬಳಿಕ ಅಗಡಿಯೊಳಗೆ ನುಗ್ಗಿದ ಕಳ್ಳರು ಗ್ಯಾಸ್ ಕಟರ್ ಬಳಸಿ ಲಾಕರ್ ಒಡೆದು ಇಪತ್ತು ನಾಲ್ಕು ಲಕ್ಷ ಮೌಲ್ಯದ ಚಿನ್ನದ ಗಟ್ಟಿ ಕಳ್ಳತನ ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.



Join Whatsapp