ಎಂಇಎಸ್ ಮುಖಂಡನಿಗೆ ಕಪ್ಪು ಮಸಿ ಬಳಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು

Prasthutha|

ಬೆಳಗಾವಿ: ಎಂಇಎಸ್ ಮುಖಂಡರೊಬ್ಬರಿಗೆ ಕಪ್ಪು ಮಸಿ ಬಳಿದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನಮಂಡಲ ಅಧಿವೇಶನ ಆರಂಭಗೊಂಡಿದ್ದು, ಅಧಿವೇಶನ ವಿರೋಧಿಸಿ ಎಂಇಎಸ್ ಮಹಾಮೇಳವ ಹಮ್ಮಿಕೊಂಡಿದೆ.

- Advertisement -

ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಎಂಇಎಸ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಎಂಇಎಸ್ ಮುಖಂಡ ದೀಪಕ್ ದಳವಿ ಎಂಬವರ ಮೇಲೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಮಸಿ ಎರಚಿದ ಕನ್ನಡ ಪರ ಸಂಘಟನೆಯ ಪ್ರಮುಖರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಖಂಡಿಸಿ ನಾಳೆ ಬೆಳಗಾವಿ ಬಂದ್ ಗೆ ಎಂಇಎಸ್ ಕರೆ ನೀಡಿದೆ ಎಂದು ಮುಖಂಡ ಮನೋಹರ ಕಿಣೇಕರ್ ತಿಳಿಸಿದ್ದಾರೆ.
ಮಹಾಮೇಳಾವ ಮುಗಿದ ಬಳಿಕ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ನಾಳಿನ ಬಂದ್ ಯಶಸ್ವಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.

- Advertisement -

ವಿಧಾನಮಂಡಲ ಚಳಿಗಾಲದ ಅಧಿವೇಶನ ವಿರೋಧಿಸಿ ಎಂಇಎಸ್ ಹಮ್ಮಿಕೊಂಡಿರುವ ಮಹಾಮೇಳಾವ ವೇದಿಕೆಯನ್ನು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಿದ್ದಾರೆ. ಈ ವೇಳೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಎಂಇಎಸ್ ಮುಖಂಡರ ಮೇಲೆ ಮಸಿ ಬಳಿದರು. ಇದನ್ನು ಖಂಡಿಸಿ ಎಂಇಎಸ್ ಮುಖಂಡರು ಮಂಗಳವಾರ ಬೆಳಗಾವಿ ಬಂದ್ಗೆ ಕರೆ ನೀಡಿದ್ದಾರೆ.



Join Whatsapp