ಅನೈತಿಕ ಸಂಬಂಧ ಜೋಡಿ‌ ಕೊಲೆ: ಹೆಣವಾಗಿ ಹೋದ ಗ್ರಾಮ ಪಂಚಾಯಿತಿ ಸದಸ್ಯ !

Prasthutha|

ಬೆಂಗಳೂರು: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆತನ ಪ್ರೇಯಸಿ ಇಬ್ಬರ ಜೋಡಿ‌ ಕೊಲೆ ನಡೆದಿರುವ ಘಟನೆ ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಕೆ ಡಾಬಾ ಬಳಿ ನಡೆದಿದೆ.

- Advertisement -

ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ನಾರಾಯಣಸ್ವಾಮಿ ಮತ್ತು‌ಕಾವ್ಯ ಕೊಲೆಯಾದವರು ಎಂದು ಗುರುತಿಸಲಾಗಿದೆ.

ರಾಜಕೀಯ ಪಕ್ಷವೊಂದರ ಸ್ಥಳೀಯ ಮುಖಂಡರೂ ಆಗಿದ್ದ  ಚಿಕ್ಕಹಾಗಡೆ ನಾರಾಯಣಸ್ವಾಮಿ ವಿವಾಹಿತ ಮಹಿಳೆ ಕಾವ್ಯ  ಜೊತೆ ಅನೈತಿಕ ಸಂಬಂಧ ಹೊಂದಿದ್ದನು.

- Advertisement -

ವಿಷಯ ತಿಳಿದ ಕಾವ್ಯಳ‌ ಪತಿ ಹಲವು ಬಾರಿ ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದ ಆದರೂ ಇಬ್ಬರು ಅನೈತಿಕ ಸಂಬಂಧವನ್ನು ಮುಂದುವರೆಸಿದ್ದರು.

ಪತ್ನಿ ಕಾವ್ಯಳೊಂದಿಗೆ ನಾರಾಯಣಸ್ವಾಮಿ ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಕೆ ಡಾಬಾ ಎದುರಿನ ರಸ್ತೆಯ ಪಕ್ಕ​ ಮನೆಯಲ್ಲಿ ಇರುವುದನ್ನು ಪತಿ ಪತ್ತೆಹಚ್ಚಿದ್ದಾನೆ.

ಇಬ್ಬರು ಮನೆಯಲ್ಲಿದ್ದ ವೇಳೆ ರೊಚ್ಚಿಗೆದ್ದ ಕಾವ್ಯಳ ಗಂಡ ಇಬ್ಬರನ್ನು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.  ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಕೆ ಡಾಬಾ ಎದುರಿನ ರಸ್ತೆಯ ಪಕ್ಕದಲ್ಲಿ ಶೀಟ್​ ಮನೆಯಲ್ಲಿ ಇಬ್ಬರು ಇದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಎಎಸ್ಪಿ ಲಕ್ಷ್ಮಿ ಗಣೇಶ್​, ಡಿವೈಎಸ್ಪಿ ಎಂ ಮಲ್ಲೇಶ್​​ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧ ಸೂರ್ಯ ಸಿಟಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ‌ತನಿಖೆಯನ್ನು ಕೈಗೊಂಡಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp