ಬೆಂಗಳೂರು: ಪ್ಯಾಂಟ್ ಮತ್ತು ಒಳ ಉಡುಪಿನೊಳಗೆ ಚಿನ್ನ ಇಟ್ಟು ಅಕ್ರಮ ಸಾಗಣಿಕೆ ಮಾಡುತ್ತಿದ್ದ ಜಾಲವನ್ನು ಕಸ್ಟಮ್ಸ್ ಅಧಿಕಾರಿಗಳು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 602 ಗ್ರಾಂ ಪೇಸ್ಟ್ ರೂಪದ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಶಾರ್ಜಾದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನನ್ನು ಕಸ್ಟಮ್ಸ್ ಸಿಬ್ಬಂದಿ ತಪಾಸಣೆ ನಡಿಸಿದ್ದರು.
ಈ ಸಂದರ್ಭದಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿದ್ದ ಪ್ಯಾಂಟ್ ಮತ್ತು ಒಳ ಉಡುಪನ್ನು ಧರಿಸಿದ ವ್ಯಕ್ತಿ ಅದರೊಳಗೆ ಪೇಸ್ಟ್ ರೂಪದ ಚಿನ್ನವನ್ನು ಮರೆಮಾಚಿ ಇಟ್ಟಿದ್ದು, ಪತ್ತೆಯಾಗಿತ್ತು.
ಪ್ರಯಾಣಿಕನನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, 30 ಲಕ್ಷ ರೂ. ಮೌಲ್ಯದ 602 ಗ್ರಾಂ ತೂಕದ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.