ಕ್ರಿಶ್ಚಿಯನ್ ಶಾಲೆಗಳಲ್ಲಿ ಓದಿದ ಬಿಜೆಪಿ ನಾಯಕರ ಮಕ್ಕಳನ್ನು ಎಂದಾದರೂ ಮತಾಂತರಿಸಲು ಯತ್ನ ನಡೆದಿದೆಯೇ ? ಡಿಕೆಶಿ ಪ್ರಶ್ನೆ

Prasthutha|


ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದನ್ನು ಖಂಡಿತವಾಗಿ ಕಾಂಗ್ರೆಸ್ ವಿರೋಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವಿಧಾನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ತರಲು ಸರ್ಕಾರ ಮುಂದಾಗಿದೆ. ಒಂದು ಖಾಸಗಿ ವಿಧೇಯಕದ ಮೂಲಕ ಹಾಗೂ ಮತ್ತೊಂದು ಕಾನೂನು ಬದ್ದವಾಗಿವಾಗಿ ತರಲು ಮುಂದಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಪ್ರತಿಯೊಂದು ಸಮುದಾಯವನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಮತಾಂತರ ನಿಷೇಧ ಕಾಯ್ದೆ ವಿಚಾರ ಅಂತಾರಾಷ್ಟ್ರೀಯ ವಿಚಾರ. ಇವರ ಮಕ್ಕಳು ಓದಲು ಸೈಂಟ್ ಜೋಸೆಫ್ ಶಾಲೆ ಬೇಕು. ತಮ್ಮ ಮಕ್ಕಳಿಗೆ ಶಾಲೆ ಕಾಲೇಜುಗಳು ಸೀಟ್ ಗಾಗಿ BJP ನಾಯಕರು ಕ್ರಿಶ್ಚಿಯನ್ ಸಮುದಾಯದವರ ಮನೆ ಬಾಗಿಲಿಗೆ ಹೋಗುತ್ತಾರೆ. ಅಲ್ಲಿ ಓದಿದ ಅವರ ಮಕ್ಕಳನ್ನು BJP ನಾಯಕರು ಕೇಳಲಿ, ಎಂದಾದರೂ ಬಲವಂತ ಮತಾಂತರಕ್ಕೆ ಯತ್ನ ನಡೆದಿದೆಯಾ ? ಎಂದು ಡಿಕೆಶಿ ಪ್ರಶ್ನಿಸಿದರು.


ರಾಜ್ಯದಲ್ಲಿ CM ಬದಲಾವಣೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷರು, ಮೂರು ಜನ CM ಮಾಡುವ ಸಂಪ್ರದಾಯ BJPಯಲ್ಲಿದೆ. CM ಬದಲಾವಣೆ ಅವರ ಇಂಟರ್ ನಲ್ ವಿಚಾರ, 3 ಜನ ಆದರೂ ಆಗಲಿ 6 ಜನ ಆದರೂ ಆಗಲಿ, ಅದಕ್ಕೂ ಮೊದಲು ರಾಜ್ಯದ ಜನ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.

- Advertisement -


ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಬಿಜೆಪಿ ನಾಯಕರು 15 ಸ್ಥಾನ ಗೆಲ್ಲುವುದಾಗಿ ಹೇಳಿದ್ದಾರೆ. ಅವರು ಗೆದ್ದು ಉಳಿದ ಸ್ಥಾನಗಳನ್ನ ನಾವು ತೆಗೆದುಕೊಳುತ್ತೇವೆ. ನಮ್ಮ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ವ್ಯಂಗ್ಯವಾಡಿದರು.



Join Whatsapp