ಶೈಕ್ಷಣಿಕ ಆ್ಯಪ್ ‘ಬೈಜೂಸ್’ ಸಂಸ್ಥೆ ವಿರುದ್ಧ ಗಂಭೀರ ಆರೋಪ ಹೊರಿಸಿದ ಬಿಬಿಸಿ!

Prasthutha|

ಹೊಸದಿಲ್ಲಿ: ಶೈಕ್ಷಣಿಕ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಬೈಜೂಸ್ ಆ್ಯಪ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ.
ಮರುಪಾವತಿ ಮತ್ತು ಸೇವೆಗಳ ಬಗ್ಗೆ ಪೋಷಕರಿಂದ ದೂರುಗಳು ಬಂದಿದ್ದು, ಕಂಪನಿಯು ಭರವಸೆ ನೀಡಿದ ಸೇವೆಗಳನ್ನು ಮತ್ತು ಮರುಪಾವತಿಯನ್ನು ಒದಗಿಸುತ್ತಿಲ್ಲ ಎಂದು ಸುದ್ದಿ ಸಂಸ್ಥೆ ಬಿಬಿಸಿ ಗಂಭೀರ ಆರೋಪ ಮಾಡಿದೆ.

- Advertisement -

2011 ರಲ್ಲಿ ವಿಶ್ವದ ಅತ್ಯಂತ ಮೌಲ್ಯಯುತವಾದ ಶಿಕ್ಷಣ ಸಂಸ್ಥೆಯಾಗಿ ಪ್ರಾರಂಭಗೊಂಡ ಬೈಜೂಸ್ ಆ್ಯಪ್ ಆರು ಮಿಲಿಯನ್ ಗೂ ಅಧಿಕ ಬಳಕೆದಾರರನ್ನು ಹೊಂದಿದೆ.

ಫೇಸ್‌ಬುಕ್ ಸಂಸ್ಥಾಪಕ ಜುಕರ್‌ ಬರ್ಗ್ ಅವರ ಮಗಳ ಹೆಸರಿನ ಚಾನ್ ಜುಕರ್‌ ಬರ್ಗ್ ಇನಿಶಿಯೇಟಿವ್ ಬೈಜೂಸ್ ನಲ್ಲಿ ಅತ್ಯಂತ ಮೌಲ್ಯಯುತ ಹೂಡಿಕೆ ಮಾಡಿದೆ. ಟೈಗರ್ ಗ್ಲೋಬಲ್ ಮತ್ತು ಜನರಲ್ ಅಟ್ಲಾಂಟಿಕ್‌ ನಂತಹ ಅಮೆರಿಕದ ಕಂಪನಿಗಳೂ ಇದರಲ್ಲಿ ಹೂಡಿಕೆ ಮಾಡಿವೆ.

- Advertisement -

ಕಂಪನಿಯು ಬ್ಯುಸಿನೆಸ್ ತಂತ್ರದ ಮೂಲಕ ಪೋಷಕರಿಗೆ ನಿರಂತರವಾಗಿ ಕರೆ ಮಾಡುತ್ತದೆ. ಮರುಪಾವತಿಗಾಗಿ ಕರೆ ಮಾಡಿದರೆ ಸೇಲ್ಸ್ ಏಜೆಂಟ್‌ಗಳು ತಮ್ಮನ್ನು ಸತಾಯಿಸುತ್ತಾರೆ ಎಂದು ಪೋಷಕರು ಆರೋಪಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಕಂಪನಿಯು ನಿಗದಿಪಡಿಸಿದ ಟಾರ್ಗೆಟ್ ಪೂರ್ತಿಗೊಳಿಸಲು ದಿನಕ್ಕೆ 12 ರಿಂದ 15 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿ ಬಂದಿದೆ ಎಂದು ಬೈಜೂಸ್‌ ನ ಮಾಜಿ ಉದ್ಯೋಗಿಗಳೂ ಕೂಡ ಆರೋಪಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.



Join Whatsapp