ಸಿಂಘು ಗಡಿಯಲ್ಲಿ ರೈತರ ಹೋರಾಟ ಅಂತ್ಯ : ಸಂಯುಕ್ತ ಕಿಸಾನ್ ಘೋಷಣೆ

Prasthutha|

ನವದೆಹಲಿ : ರೈತ ವಿರೋಧಿ ಕಾಯ್ದೆ ವಿರೋಧಿಸಿ ರೈತರು ಸಿಂಘು ಗಡಿಯಲ್ಲಿ ನಡೆಸುತ್ತಿದ್ದ ಹೋರಾಟ ಡಿಸೆಂಬರ್ 11 ರಂದು ಅಂತ್ಯವಾಗಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ. ಇಂದು ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ರೈತ ನಾಯಕರು ಹೋರಾಟವನ್ನು ಅಂತ್ಯಗೊಳಿಸಿರುವುದಾಗಿ ಘೋಷಿಸಿದ್ದಾರೆ.

- Advertisement -

ಡಿಸೆಂಬರ್ 11ರಂದು ರೈತರು ಸಿಂಘು ಗಡಿಯಿಂದ ವಾಪಾಸಾಗುತ್ತಾರೆ. ಡಿಸೆಂಬರ್ 13 ರಂದು ಸ್ವರ್ಣ ಮಂದಿರ ತಲುಪಲಿದ್ದಾರೆ ಎಂದು SKM ಹೇಳಿದೆ. ಸರಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದರಿಂದ ಹೋರಾಟವನ್ನು ಅಂತ್ಯಗೊಳಿಸಿದ್ದೇವೆ, ಅಲ್ಲದೇ ಸರಕಾರ ಮಾತು ತಪ್ಪಿದ್ದಲ್ಲಿ ಹೋರಾಟವನ್ನು ಮತ್ತೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ನಾವು ದೊಡ್ಡ ಗೆಲುವನ್ನು ಸಾಧಿಸಿ ಈ ಹೋರಾಟವನ್ನು ಅಂತ್ಯಗೊಳಿಸುತ್ತಿದ್ದೇವೆ ಎಂದು ರೈತ ನಾಯಕರು ಹೇಳಿದ್ದಾರೆ. ಕೇಂದ್ರ ಬಿಜೆಪಿ ಸರಕಾರವು ಈ ಹಿಂದೆ ಮೂರು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿತ್ತು, ಇದರ ವಿರುದ್ಧ ರೈತರು ದೇಶಾದ್ಯಂತ ಧಂಗೆ ಏಳಿದ್ದರು. ಸತತ ಒಂದು ವರ್ಷಗಳ ಕಾಲ ನಡೆಸಿದ್ದ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ ಇತ್ತೀಚೆಗೆ ಮೂರೂ ಕಾಯ್ದೆಗಳನ್ನು ಹಿಂಪಡೆದಿತ್ತು.



Join Whatsapp