ಜಿಲ್ಲಾಧಿಕಾರಿಯಿಂದ ಮನವಿ| ಉಳ್ಳಾಲ ಉರೂಸ್ ಮುಂದೂಡಿಕೆ

Prasthutha|

ಉಳ್ಳಾಲ: ಇತಿಹಾಸ ಪ್ರಸಿದ್ಧ ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರೂಸನ್ನು ಮುಂದಿನ ಎರಡು ತಿಂಗಳಿಗೆ ಮುಂದೂಡಲು ಆಡಳಿತ ಸಮಿತಿ ತೀರ್ಮಾನಿಸಿದೆ.

- Advertisement -

ಡಿಸೆಂಬರ್ 23ರಿಂದ ಪ್ರಾರಂಭಗೊಳ್ಳಬೇಕಿದ್ದ ಉಳ್ಳಾಲ ಉರೂಸನ್ನು ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.


ದರ್ಗಾದ ಆಡಳಿತ ಸಮಿತಿಯು ಉರೂಸ್ ಕಾರ್ಯಕ್ರಮಕ್ಕೆ ಪ್ರಚಾರ ಕಾರ್ಯವನ್ನೂ ಕೈಗೊಂಡು ಅತಿಥಿಗಳನ್ನೂ ಆಹ್ವಾನಿಸಿತ್ತು. ಈ ನಡುವೆ ರಾಜ್ಯದಲ್ಲಿ ಓಮಿಕ್ರಾನ್ ಭೀತಿಯಿಂದಾಗಿ ಆಡಳಿತ ಸಮಿತಿಯ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿ ಉರೂಸನ್ನು ಮುಂದೂಡಲು ಮನವಿ ಮಾಡಿದ್ದರು. ಅದರಂತೆ ಇದೀಗ ಆಡಳಿತ ಸಮಿತಿಯೂ ಉರೂಸನ್ನು ಮುಂದಿನ ಎರಡು ತಿಂಗಳಿಗೆ ಮುಂದೂಡಿ ತೀರ್ಮಾನ ಕೈಗೊಂಡಿದೆ.

Join Whatsapp