ನಾಯ್ಪಿಡಾವ್: ಮ್ಯಾನ್ಮಾರ್ನ ಸೇನೆಯ ಜುಂಟಾ ಪಡೆಗಳು ಮಂಗಳವಾರ 11 ಅಮಾಯಕ ನಾಗರಿಕರನ್ನು ಜೀವಂತ ಸುಟ್ಟು ಕೊಂದಿರುವ ಘಟನೆ ನಡೆದಿದ್ದು, ಇದು ಬಂಡುಕೋರರ ದಾಳಿಗಳಿಗೆ ಪ್ರತೀಕಾರ ಎಂದು ಹೇಳಲಾಗಿದೆ.
ಸಗಾಯಿಂಗ್ ಪ್ರದೇಶದಲ್ಲಿ ಈ ಹತ್ಯಾಕಾಂಡ ನಡೆದಿದ್ದು, ಘಟನೆಯ ನಂತರದ ಈ ಕುರಿತ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
“ಹತ್ಯೆಗೀಡಾದವರು ಬಡ ದಿನಗೂಲಿ ಕಾರ್ಮಿಕರಾಗಿದ್ದು, ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು” ಎಂದು ಗ್ರಾಮಸ್ಥರೊಬ್ಬರು ಹೇಳಿದರು.
“ಇಂದು ಬೆಳಿಗ್ಗೆ ನಾವು ಹಳ್ಳಿಯಿಂದ ಹೊರಗೆ ಬಂದು ನೋಡಿದಾಗ ದಟ್ಟ ಹೊಗೆ ಏಳುವುದನ್ನು ನೋಡಿದೆವು. ನಂತರ ನಾವು ನೋಡಲು ಹಿಂದಿರುಗಿದಾಗ ಪುರುಷರು ಸುಟ್ಟು ಹೋಗಿರುವುದನ್ನು ನಾವು ನೋಡಿದ್ದೇವೆ” ಎಂದು ಗ್ರಾಮಸ್ಥ ಹೇಳಿದರು.