ಮಡಿಕೇರಿ | ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

Prasthutha|

ಮಡಿಕೇರಿ: ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯು ಆಚರಿಸಲಾಯಿತ್ತು.

- Advertisement -

 ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿನ ಯುದ್ಧ ಸ್ಮಾರಕಕ್ಕೆ ಕರ್ನಲ್(ನಿವೃತ್ತ) ಎನ್.ಶರತ್ ಭಂಡಾರಿ, ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ಕರ್ನಲ್(ನಿವೃತ್ತ) ಕಂಡ್ರತAಡ ಸುಬ್ಬಯ್ಯ, ಮೇಜರ್(ನಿವೃತ್ತ) ಬಿದ್ದಂಡ ನಂಜಪ್ಪ, ಕರ್ನಲ್ ಚೇತನ್ ದಿಮನ್, ಲೆಪ್ಟಿನೆಂಟ್ ಕರ್ನಲ್(ನಿವೃತ್ತ) ದೇವಯ್ಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್.ಶೆಟ್ಟಿ ಇತರರು ಪುಷ್ಪ ಗುಚ್ಛ ಸಮರ್ಪಿಸಿ, ಗೌರವ ನಮನ ಸಲ್ಲಿಸಿದರು.

 ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿ ಮೌನಾಚರಿಸಲಾಯಿತು. ಕರ್ನಲ್(ನಿವೃತ್ತ) ಎನ್.ಶರತ್ ಭಂಡಾರಿ ಅವರು ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಿದರು.        

- Advertisement -

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕರ್ನಲ್(ನಿವೃತ್ತ) ಎನ್.ಶರತ್ ಭಂಡಾರಿ ಅವರು ಕೊಡಗು ನಾಡು ಭಾರತದಲ್ಲಿಯೇ ಹೆಚ್ಚಿನ ಸೇನಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೀಡಿರುವ ಜಿಲ್ಲೆಯಾಗಿದೆ ಎಂದರು.  

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಂದರ್ಭದಲ್ಲಿ ಸಂಗ್ರಹವಾದ ನಿಧಿಯಿಂದ ಮಾಜಿ ಸೈನಿಕರು ಹಾಗೂ ಇತರೆ ಸೈನಿಕರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಶರತ್ ಭಂಡಾರಿ ಅವರು ನುಡಿದರು.

ರಾಷ್ಟ್ರದಲ್ಲಿ ೩೨ ಸೈನಿಕ ಕಲ್ಯಾಣ ರಾಜ್ಯ ಮಂಡಳಿ ಹಾಗೂ ೩೭೨ ಜಿಲ್ಲಾ ಸೈನಿಕ ಕಲ್ಯಾಣ ಮಂಡಳಿ ಇದ್ದು, ಸೈನಿಕರ ಕಲ್ಯಾಣಕ್ಕಾಗಿ ಮಂಡಳಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು. ಮಾಜಿ ಸೈನಿಕರು, ಪೊಲೀಸ್ ಸಿಬ್ಬಂಧಿಗಳು ಇತರರು ಇದ್ದರು.



Join Whatsapp