ಗೋಣಿಕೊಪ್ಪಲು : ಕೀರೆಹೊಳೆ ದಡ ಒತ್ತುವರಿ ತೆರವು ಕಾರ್ಯಾಚರಣೆ

Prasthutha|

ಗೋಣಿಕೊಪ್ಪಲು: ಗೋಣಿಕೊಪ್ಪಲು ತೋಡು, ಕೀರೆಹೊಳೆ ದಡ ಒತ್ತುವರಿ ತೆರವು ಕಾರ್ಯಾಚರಣೆ ಇಂದಿನಿಂದ ಆರಂಭವಾಗಿದ್ದು, ಬೈಪಾಸ್ ರಸ್ತೆಯ ಪಶ್ಚಿಮ ಭಾಗದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.

- Advertisement -


ಸುಮಾರು 28 ಅತಿಕ್ರಮಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ತಹಶೀಲ್ದಾರ್ ಯೋಗಾನಂದ ನೇತೃತ್ವದಲ್ಲಿ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ಜಯರಾಮ್, ಪೊಲೀಸ್ ಉಪ ನಿರೀಕ್ಷಕ ಸುಬ್ಬಯ್ಯ, ಪೊಲೀಸ್- ಕಂದಾಯ ಇಲಾಖೆ ಸಿಬ್ಬಂದಿ ಸಮಕ್ಷಮದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅಕ್ರಮ ಒತ್ತುವರಿ ಪ್ರಭಾವಿ ಉದ್ಯಮಿಗಳಲ್ಲಿ ಆತಂಕ ಶುರುವಾಗಿದ್ದು, ತಹಶೀಲ್ದಾರ್ ಯೋಗಾನಂದ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರ ಪ್ರಶಂಶೆ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವಧಿಯಲ್ಲಿ ಗೋಣಿಕೊಪ್ಪಲು ಕೀರೆಹೊಳೆ, ಕೈಕೇರಿ ತೋಡು ಒತ್ತುವರಿ ಸರ್ವೆ ಕಾರ್ಯನಡೆಸಿ ತೆರವು ಕಾರ್ಯ ಮುಲಾಜಿಲ್ಲದೆ ನಡೆಸುವಂತೆ ಯೋಗಾನಂದ್ ಆದೇಶಿಸಿದ್ದರು.

1920ರ ನಕಾಶೆಯಂತೆ ತೋಡು, ಹೊಳೆ ಗಡಿ ಗುರುತು ಮಾಡಿ ತೆರವು ಕಾರ್ಯ ನಡೆಸಲಾಗುತ್ತಿದ್ದು, ಹಲವು ವರ್ಷದ ಸಾರ್ವಜನಿಕ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಕೊಡಗು ಜಿಲ್ಲಾಧಿಕಾರಿ ಎಂ.ವಿ.ಜಯಂತಿ ಅವಧಿಯಲೇ ಒತ್ತುವರಿ ತೆರವಿಗೆ ಒತ್ತಡ ಹೆಚ್ಚಾಗಿತ್ತು. ಕೊಡಗು ಉಪ ವಿಭಾಗಾಧಿಕಾರಿ ಡಾ.ಎಂ.ಆರ್.ರವಿ ಅವಧಿಯಲ್ಲಿ ಇಲ್ಲಿನ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತಾದರೂ ಕಂದಾಯ ಇಲಾಖೆ ನುಂಗಣ್ಣಗಳಿಂದ ಹಿನ್ನಡೆಯಾಗಿತ್ತು.

- Advertisement -


ತಹಶೀಲ್ದಾರ್ ಯೋಗಾನಂದ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಶಾಸಕ ಬೋಪಯ್ಯ ಅವರಿಂದಲೂ ಪ್ರಭಾವಿಗಳ ಅತಿಕ್ರಮ ತೆರವಿಗೆ ಕಂದಾಯ ಇಲಾಖೆ ಮೇಲೆ ನಿರಂತರ ಒತ್ತಡವಿತ್ತು. ಇದೀಗ ಸಾಕಾರಗೊಂಡಿದೆ. ಇಲ್ಲಿನ ಭೂ ಮಾಫಿಯಾ ಕುಳಗಳೂ ಅಕ್ರಮ ಒತ್ತುವರಿ ಮಾಡಿಕೊಂಡು ಸೈಟ್ ಗಳನ್ನಾಗಿ ಮಾರ್ಪಾಡು ಮಾಡಿ ಮಾರಾಟ ಮಾಡಿದ್ದರು.



Join Whatsapp