ಮಥುರಾ ಮಸೀದಿ ವಿರುದ್ಧದ ಹೇಳಿಕೆ ಖಂಡನೆ: ಟ್ವಿಟ್ಟರ್ ನಲ್ಲಿ #SaveMathuraMasjid ಟ್ರೆಂಡ್

Prasthutha|

ಲಕ್ನೋ: ಮಥುರಾ ಮಸೀದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಹೇಳಿಕೆಯನ್ನು ಖಂಡಿಸಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಟ್ವಿಟ್ಟರ್ ನಲ್ಲಿ #SaveMathuraMasjid ಅಭಿಯಾನ ನಡೆಸಿದ್ದಾರೆ.

- Advertisement -

ಅಯೋಧ್ಯೆ ಮತ್ತು ಕಾಶಿಯಲ್ಲಿ ದೇವಾಲಯ ನಿರ್ಮಾಣ ಪ್ರಗತಿಯಲ್ಲಿರುವ ಮಧ್ಯೆ ಮಥುರಾದಲ್ಲಿ ಮಸೀದಿಯನ್ನು ತೆರವುಗೊಳಿಸಿ ಮಂದಿರ ನಿರ್ಮಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ಈ ನಡುವೆ ಸಂಘಪರಿವಾರ ಮಥುರಾವನ್ನು ಭಗವಾನ್ ಕೃಷ್ಣನ ಜನ ಸ್ಥಳವೆಂದು ಬಿಂಬಿಸಿ ಹುಯಿಲೆಬ್ಬಿಸುತ್ತಿದೆ.

- Advertisement -

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಜನಬೆಂಬಲ ಲಭಿಸುವಂತಾಗಲು ಪಕ್ಷದ ಹಿರಿಯ ಮುಖಂಡ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಮೊಗಲ್ ದೊರೆ ಔರಂಗಜೇಬ್ ಕಾಲದಲ್ಲಿ ನಿರ್ಮಾಣವಾದ ಮಥುರಾ ಮಸೀದಿ ಕುರಿತು ಸಂಘಪರಿವಾರ ನಿರಂತರ ಅಪಪ್ರಚಾರ ನಡೆಸುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಈ ಮಧ್ಯೆ ಮಥುರಾ ಮಸೀದಿ ತಗಾದೆ ಎತ್ತುತ್ತಿರುವ ಸಂಘಪರಿವಾರ ಇತ್ತೀಚೆಗೆ ಮಸೀದಿಯೊಳಗಡೆ ಕೃಷ್ಣ ಮೂರ್ತಿ ಪ್ರತಿಷ್ಠಾಪನೆ ಮತ್ತು ಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಹೇರಿದೆ. ಮಾತ್ರವಲ್ಲ ಮಥುರಾದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕೆಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಾಹಲ್ ತಿಳಿಸಿದ್ದಾರೆ.



Join Whatsapp