ಮಂಗಳೂರು: ವಿಶ್ವ ಏಡ್ಸ್ ದಿನದ ಅಂಗವಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಕಾಪಿಕಾಡ್ ನಲ್ಲಿರುವ ಸ್ನೇಹ ದೀಪ ಆಶ್ರಮಕ್ಕೆ ಭೇಟಿ ನೀಡಿ ಆಹಾರ ಕಿಟ್, ಚಾಕೋಲೇಟ್ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಮ್ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ, ಉಪಾಧ್ಯಕ್ಷರಾದ ಮರಿಯಮ್ಮ ಹಾಗೂ ಕಾರ್ಪೊರೇಟರ್ ಸಂಶಾದ್ ಅಬೂಬಕರ್ ಹಾಜರಿದ್ದರು. ಆಶ್ರಮದ ಉಸ್ತುವಾರಿ ತಬಸ್ಸುಮ್ ಜೊತೆ ಮಕ್ಕಳ ಕುರಿತು ಸಮಾಲೋಚನೆ ನಡೆಸಿದರು