ಜಿದ್ದಾ: ಮೊದಲ ರೂಪಾಂತರಿ ಓಮಿಕ್ರಾನ್ ಪ್ರಕರಣವನ್ನು ಪತ್ತೆ ಹಚ್ಚಿರುವುದಾಗಿ ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ.
ಉತ್ತರ ಆಪ್ರಿಕಾದ ನಾಗರಿಕನ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮಾತ್ರವಲ್ಲ ಸೋಂಕಿತ ವ್ಯಕ್ತಿ ಮತ್ತು ಆತನ ನಿಕಟ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದರೊಂದಿಗೆ ಗಲ್ಫ್ ರಾಷ್ಟವೊಂದರಲ್ಲಿ ಮೊದಲ ಓಮಿಕ್ರಾನ್ ವೈರಸ್ ಪತ್ತೆಯಾದಂತಾಗಿದೆ.
ಈ ಮಧ್ಯೆ ವಿಜ್ಞಾನಿಗಳು ಓಮಿಕ್ರಾನ್ ವೈರಸ್ ಮಾದರಿಗಳನ್ನು ಪರೀಕ್ಷಿಸಿದಾಗ ಎರಡರಿಂದ ನಾಲ್ಕು ವಾರಗಳಲ್ಲಿ ಓಮಿಕ್ರಾನ್ ಸ್ಟ್ರೈನ್ ಕುರಿತು ಹೆಚ್ಚಿನ ಮಾಹಿತಿ ಲಭಿಸಲಿದೆ ಎಂದು ಅಮೆರಿಕದ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ.