ಮುಂಬೈ : ದಕ್ಷಿಣ ಮುಂಬೈನ ಜನನಿಬಿಡ ರಸ್ತೆಯಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ ಅವರ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಇಮ್ಯಾನ್ಯುವೆಲ್ ಮ್ಯಾಕ್ರನ್ ನ ಇಸ್ಲಾಂ ವಿರೋಧಿ ನಡೆಯ ವಿರುದ್ಧ ವಿಶ್ವಾದ್ಯಂತ ಪ್ರತಿಭಟನೆಯ ಭಾಗವಾಗಿ ಅವರ ಪೋಸ್ಟರನ್ನು ಮುಂಬೈ ರಸ್ತೆಯಲ್ಲಿ ಪೋಸ್ಟ್ ಮಾಡಿರಬಹುದೆಂದು ಶಂಕಿಸಲಾಗಿದೆ. ಆದರೆ ಪೋಸ್ಟರನ್ನು ಅಂಟಿಸಿದವರು ಯಾರೆಂದು ಸ್ಪಷ್ಟವಾಗಿಲ್ಲ. ಬೆಂಡಿ ಬಝಾರ್ ಪ್ರದೇಶದ ಮುಹಮ್ಮದ್ ಅಲಿ ರಸ್ತೆಯಲ್ಲಿ ಈ ಪೋಸ್ಟರ್ ಪತ್ತೆಯಾಗಿದೆ.
ಪೋಸ್ಟರ್ ಮೇಲೆ ವಾಹನಗಳು ಚಲಿಸುವ ಮತ್ತು ಪಾದಚಾರಿಗಳು ನಡೆಯುವ ವಿಡಿಯೋಗಳು ವ್ಯಾಪಕವಾಗಿ ವೈರಲಾಗಿದೆ. ನಂತರ ಪೊಲೀಸರು ಆಗಮಿಸಿ ಪೋಸ್ಟರ್ ಗಳನ್ನು ತೆಗೆದು ಹಾಕಿದ್ದಾರೆ. ಘಟನೆಗೆ ಸಂಬಂಧಿಸಿ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.