ಸಂಘಪರಿವಾರದ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ: ಒಂಬತ್ತು ಆರೋಪಿಗಳು ದೋಷಮುಕ್ತ

Prasthutha|

ಮಡಿಕೇರಿ: ಸಂಘಪರಿವಾರದ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಒಂಬತ್ತು ಆರೋಪಿಗಳನ್ನು ಕೊಡಗು ಜಿಲ್ಲಾ ಪ್ರಧಾನ ನ್ಯಾಯಾಲಯ ದೋಷ ಮುಕ್ತಗೊಳಿಸಿದೆ.

- Advertisement -


ತುಫೈಲ್, ನಯಾಝ್, ಅಫ್ರಿನ್, ಮುಹಮ್ಮದ್, ಮುಸ್ತಫಾ, ಇಲ್ಯಾಸ್, ಇರ್ಫಾನ್, ಮಜೀದ್, ಹ್ಯಾರಿಸ್ ಖುಲಾಸೆಗೊಂಡವರು.


2016ರ ಆಗಸ್ಟ್ 14 ರಂದು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರಿನಲ್ಲಿ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಲಾಗಿತ್ತು. ಆಟೋ ರಿಕ್ಷಾ ಚಾಲಕನಾಗಿದ್ದ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತನಾಗಿದ್ದ ಪ್ರವೀಣ್ ಆಗಸ್ಟ್ 14ರ ರಾತ್ರಿ ನಡೆದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಹಿಂದಿರುಗುವಾಗ ಹತ್ಯೆ ನಡೆದಿತ್ತು.



Join Whatsapp