ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಬಂದ 1,000 ಮಂದಿ: 466 ಮಂದಿಯ ಪಟ್ಟಿ ಮಾತ್ರ ಲಭ್ಯ

Prasthutha|

ಮುಂಬೈ: ಕೊರೋನಾ ರೂಪಾಂತರ ತಳಿ ಓಮಿ ಕ್ರಾನ್ ಪತ್ತೆಯಾದ ದಕ್ಷಿಣ ಆಫ್ರಿಕಾ ದೇಶಗಳಿಂದ 1,000 ಮಂದಿ ಮುಂಬೈಗೆ ಬಂದಿರುವುದಾಗಿ ವಿಮಾನ ನಿಲ್ದಾಣದ ಪ್ರಾಧಿಕಾರ ತಿಳಿಸಿದೆ.

- Advertisement -

ಸಾವಿರ ಮಂದಿಯಲ್ಲಿ 466 ಮಂದಿಯ ಪಟ್ಟಿ ಮಾತ್ರ ಸಿಕ್ಕಿದ್ದು, ಅದರಲ್ಲಿ 100 ಮಂದಿಯ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಉಳಿದವರ ಮಾದರಿಯನ್ನೂ ಇಂದು ಅಥವಾ ನಾಳೆ ಸಂಗ್ರಹಿಸುವುದಾಗಿ ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಕಾಕನಿ ಹೇಳಿದ್ದಾರೆ. ಈಗಾಗಲೇ ಇದರಲ್ಲಿ 100 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಿರುವ ಮಾದರಿಗಳ ಪರೀಕ್ಷಾ ವರದಿ ಇಂದು ಅಥವಾ ನಾಳೆ ಬರಲಿದ್ದು, ಪಾಸಿಟಿವ್ ಬಂದವರಿಗೆ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲಾಗುವುದು. ಆ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಪಾಲಿಕೆ ಅಡಿಯಲ್ಲಿ ಬರುವ ಅಂಧೇರಿಯ 5 ಆಸ್ಪತ್ರೆಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ ಎಂದಿದ್ದಾರೆ.



Join Whatsapp