ಬೆಳೆ ಪರಿಹಾರ ಅರ್ಜಿಗೆ ಕಂದಾಯ ಕಟ್ಟಲೇಬೇಕು: ಅಧಿಕಾರಿಗಳ ನಿರ್ಧಾರಕ್ಕೆ ಕರವೇ ವಿರೋಧ

Prasthutha|

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ರೈತರು ಮಳೆಯಿಂದ ತಮ್ಮ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸದ್ಯ ಮಳೆಯಿಂದ ಬೆಳೆ ಕಳೆದುಕೊಂಡು ತೊಂದರೆಗೆ ಈಡಾದ ಬೆಳೆಗಾರರಿಗೆ ಸರಕಾರದಿಂದ ಪರಿಹಾರ ಕೊಡಲು ನಿರ್ಧರಿಸುತ್ತಾರೆ. ಆದರೆ ದೇವರು ಕೊಟ್ಟರು ಪೂಜಾರಿ ಕೊಡಲ್ಲ ಅನ್ನೋ ಗಾದೆ ಮಾತಿನಂತೆ ರೈತರು ಅರ್ಜಿ ಹಾಕಲು ದಾಖಲೆಗಳು ಕೊಟ್ಟರೂ ಸಹ ಕಂದಾಯ ರಸೀದಿ ಕಡ್ಡಾಯ ಬೇಕೇ ಬೇಕು ಎಂದು ಸೋಮವಾರಪೇಟೆ ತಾಲ್ಲೂಕಿನ ಕಂದಾಯ ಅಧಿಕಾರಿಗಳು ಹೇಳುತ್ತಿರುವುದನ್ನು ಕರವೇ ಕಾರ್ಯಕರ್ತರು ಖಂಡಿಸಿದ್ದಾರೆ.

- Advertisement -

ರೈತರು ಕಷ್ಟದಲ್ಲಿರುವಾಗ ಕಂದಾಯ ಕಡ್ಡಾಯಗೊಳಿಸಿರುವ ಅಧಿಕಾರಿಗಳಿಗೆ ಕರವೇ ಕಾರ್ಯಕರ್ತರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಕಂದಾಯ ಕಟ್ಟಲೇಬೇಕೆಂಬ ಸರ್ಕಾರದ ಆದೇಶ ಇಲ್ಲದಿದ್ದರೂ, ಸೋಮವಾರಪೇಟೆ ಅಧಿಕಾರಿಗಳು ಕಷ್ಟದಲ್ಲಿರುವ ರೈತರಿಗೆ ತೊಂದರೆ ಕೊಡುವುದು ಎಷ್ಟರ ಮಟ್ಟಿಗೆ ಸರಿ. ಇದನ್ನು ಕೊಡಗು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.



Join Whatsapp