ಬೆಂಗಳೂರು : ಮೊಹಮದ್ ನಲಪಾಡ್ ಹೆಸರು ಬಿಟ್ ಕಾಯಿನ್ ಹಗರಣದಲ್ಲಿ ಪ್ರಸ್ತಾಪವಾದ ಬಳಿಕ ಕಾಂಗ್ರೆಸ್ ಮೌನವಾಗಿದೆ ಎಂದು ಬಿಜೆಪಿ ವಕ್ತಾರ, ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ ಗೌಡ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನ ನಾಯಕರು ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ.ಆಧಾರ ರಹಿತ ಆರೋಪ ಮಾಡಿ ಜನತೆ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ.
ಆಧಾರಹಿತ ಆರೋಪ ಮಾಡೋದು ಸಿದ್ದರಾಮಯ್ಯ, ಡಿಕೆಶಿಗೆ ಚಾಳಿಯಾಗಿದೆ ಎಂದರು.ಬಿಟ್ ಕಾಯಿನ್ ಹಗರದಣ ಬಗ್ಗೆ ಕಾಂಗ್ರೆಸ್ ಒಂದೇ ಒಂದು ದಾಖಲೆ ಕೊಡಲಿಲ್ಲ. ಈಗ ಪರಿಷತ್ ಚುನಾವಣೆ ಬಂದಿದೆ. ಕಾಂಗ್ರೆಸ್ ನಾಯಕರು ಮೈಮೇಲೆ ದೆವ್ವ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದರು.
ಟೆಂಡರ್ ನಲ್ಲಿ 40% ಆರೋಪ ಸುಳ್ಳು ಕಾಂಗ್ರೆಸ್ ಕಡೆಯ ಗುತ್ತಿಗೆದಾರರ ಮೂಲಕ ಪತ್ರ ಬರೆದಿರೋದಾಗಿ ವದಂತಿ ಹಬ್ಬಿಸಿದ್ದಾರೆ. ಕಾಂಗ್ರೆಸ್ ನಾಯಕರುಪ್ರಧಾನಿಗೆ ಪತ್ರ ಬರೆಸಿದ್ದು ಕಾಂಗ್ರೆಸ್ ನವರು. ಕಾಂಗ್ರೆಸ್ ನ ಗೋವಿಂದರಾಜ್ ಮನೆಯಲ್ಲಿ ಸಿಕ್ಕ ಡೈರಿ ಬಗ್ಗೆ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಉಗ್ರಪ್ಪ ಸಲೀಂ ಅಹಮದ್ ಅವರು ಡಿಕೆಶಿ ಅವರ ಕಮೀಷನ್ ಬಗ್ಗೆ ಮಾತಾಡಿದ್ದರಲ್ಲವೇ ಎಂದು ಪ್ರಶ್ನಿಸಿದರು.