ಮರ್ದಾಳ ಘಟನೆ ಪೋಲೀಸರ ನಿಷ್ಕ್ರಿಯತೆಗೆ ಸಾಕ್ಷಿ : ಅಬ್ದುಲ್ ಹಮೀದ್ ಮೆಜೆಸ್ಟಿಕ್

Prasthutha|

ಮರ್ದಾಳ: ಸೋಷಿಯಲ್ ಮೀಡಿಯಾದಲ್ಲಿ ಮುಸ್ಲಿಮರ ವಿರುದ್ಧ ಬರೆದ ಪೋಸ್ಟನ್ನು ಪ್ರಶ್ನಿಸಿದ ಕಾರಣವನ್ನು ಇಟ್ಟು ಕೊಂಡು, ಪ್ರಶ್ನಿಸಿದವನ ಮನೆಯ ಎದುರು ಭಜರಂಗದಳದ ಗೂಂಡಗಳು ಗುಂಪು ಸೇರಿ ಬೆದರಿಕೆ ಒಡ್ಡಿದ್ದು ಅಕ್ಷಮ್ಯ ಅಪರಾಧ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಹೇಳಿದ್ದಾರೆ.

- Advertisement -

ಪೋಲಿಸ್ ಇಲಾಖೆ ಯಾವುದೇ ಘಟನೆಗಳು ನಡೆದರೂ ನಮ್ಮ ಗಮನಕ್ಕೆ ತರಬೇಕು ಎನ್ನುತ್ತಾರೆ ಆದರೆ ನಿನ್ನೆ ಖುದ್ದಾಗಿ ನಾನೇ ಉನ್ನತ ಅಧಿಕಾರಿಯವರಿಗೆ ಮಾಹಿತಿ ನೀಡಿಯೂ ಭಜರಂಗದಳದ ಗೂಂಡಗಳು ತಡರಾತ್ರಿಯವರೆಗೂ ಮನೆಯ ಮುಂದೆ ಸೇರಿ ಗಲಭೆಗೆ ಯತ್ನಿಸುತ್ತಿದ್ದರೂ ಅವರನ್ನು ಅಲ್ಲಿಂದ ಚದುರಿಸಲು ಆಗದಿದ್ದು ಮತ್ತು ಅವರ ಮೇಲೆ ಕೇಸ್ ದಾಖಲಿಸದೇ ಬಿಟ್ಟದ್ದು ಪೋಲಿಸರ ಅಸಮರ್ಥಕಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪೋಲಿಸರು ಈ ಕೂಡಲೇ ಮನೆಯ ಮುಂದೆ ಗುಂಪು ಸೇರಿದವರ ಮೇಲೆ ಕ್ರಮಕೈಗೊಳ್ಳಬೇಕು:
ಪೊಲೀಸ್ ಇಲಾಖೆ ಪದೇ ಪದೇ ನಿಷ್ಕ್ರಿಯರಾಗುತ್ತಿರುವುದು ಯಾವ ಕಾರಣಕ್ಕೆ ಎಂಬುವುದು ಕೂಡ ಸ್ಪಷ್ಟಪಡಿಸಬೇಕಾಗಿದೆ. ಬಿಜೆಪಿಯವರ ಒತ್ತಡಗಳಿಂದಾಗಿ ರಕ್ಷಣೆ ನೀಡಲು ಆಗುವುದಿಲ್ಲವಾದರೆ ಜನರಿಗೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲು ಪೋಲಿಸ್ ಇಲಾಖೆ ಅನುವು ಮಾಡಿ ಕೊಡುವುದು ಒಳಿತು ಎಂದು ಅಬ್ದುಲ್ ಹಮೀದ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Join Whatsapp