NIAಯಿಂದ ಜಮ್ಮು-ಕಾಶ್ಮೀರದಲ್ಲಿ ನಾಪತ್ತೆಯಾದವರ ಕುರಿತ ಸೂಕ್ಷ್ಮ ದಾಖಲೆಗಳ ದುರ್ಬಳಕೆ ಸಾಧ್ಯತೆ | ಎಪಿಡಿಪಿ ಕಳವಳ

Prasthutha|

ನವದೆಹಲಿ : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ದಾಳಿ ಮಾಡಿ, ಕೆಲವೊಂದು ದಾಖಲೆಗಳನ್ನು ವಶಪಡಿಸಿಕೊಂಡಿರುವುದರಿಂದ ಅಂತಹ ಸೂಕ್ಷ್ಮ ದಾಖಲೆಗಳ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ನಾಪತ್ತೆಯಾದವರ ಹೆತ್ತವರ ಸಂಸ್ಥೆ (ಎಪಿಡಿಪಿ) ಕಳವಳ ವ್ಯಕ್ತಪಡಿಸಿದೆ.

- Advertisement -

ತಮ್ಮ ಸಂಸ್ಥೆಯ ಹೈದರ್ ಪೊರ ಮತ್ತು ಶ್ರೀನಗರ ಕಚೇರಿಗಳಲ್ಲಿ ಎನ್ ಐಎ ದಾಳಿ ನಡೆಸಿ, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇವುಗಳಲ್ಲಿ ಕಣಿವೆ ರಾಜ್ಯದಲ್ಲಿ ಭದ್ರತಾ ಸಿಬ್ಬಂದಿಯಿಂದ ಮಾನವ ಹಕ್ಕು ಉಲ್ಲಂಘನೆಗಳಾದ ಕುರಿತ ಅತ್ಯಂತ ಸೂಕ್ಷ್ಮ ಮಾಹಿತಿಗಳು ಈ ದಾಖಲೆಗಳು ಒಳಗೊಂಡಿದ್ದವು ಎಂದು ಸಂಸ್ಥೆ ತಿಳಿಸಿದೆ.

ಎಪಿಡಿಪಿಗೆ ಸೇರಿದ ಬೆಂಗಳೂರು ಕಚೇರಿ ಮೇಲೂ ಮಂಗಳವಾ ಎನ್ ಐಎ ದಾಳಿ ನಡೆಸಿತ್ತು. ಮಾನವ ಹಕ್ಕು ಹೋರಾಟಗಾರ್ತಿ ಪರ್ವೀನಾ ಅಹಂಗರ್ ಈ ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ.



Join Whatsapp