ಜನಪೀಡಕ ಸಂಘಟನೆಗಳಲ್ಲಿ ಆರೆಸ್ಸೆಸ್, ತಾಲಿಬಾನ್ ಮುಂಚೂಣಿಯಲ್ಲಿ
ವಾಷಿಂಗ್ಟನ್: ಜಗತ್ತಿನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ನಡೆಸಿದವರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಸಂಘಟನೆಗಳಲ್ಲಿ ಆರೆಸ್ಸೆಸ್, ತಾಲಿಬಾನ್ ಮತ್ತು ಬೋಕೋ ಪ್ರಮುಖವಾಗಿವೆ ಎಂದು ಅಮೆರಿಕ ಮೂಲದ ಇಂಟರ್ ನ್ಯಾಷನಲ್ ಕ್ರಿಶ್ಚಿಯನ್ ಕನ್ಸರ್ನ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಇಂಟರ್ ನ್ಯಾಷನಲ್ ಕ್ರಿಶ್ಚಿಯನ್ ಕನ್ಸರ್ನ್ ಎಂಬ ಕ್ರಿಶ್ಚಿಯನ್ ಸಂಸ್ಥೆ ಬಿಡುಗಡೆಗೊಳಿಸಿದ ವರದಿಯಲ್ಲಿ ಭಾರತದ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಇರಾನ್ ಅಧ್ಯಕ್ಷ ಇಬ್ರಾಹಿಮ್ ರೈಸಿ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡ ದಬ್ಬಾಳಿಕೆ ನಡೆಸುವವರ ಪಟ್ಟಿಯಲ್ಲಿದ್ದಾರೆ. ಮಾತ್ರವಲ್ಲ ಸಂಘ ಸಂಸ್ಥೆಗಳ ಪಟ್ಟಿಯಲ್ಲಿ ಕಾಂಗೋದ ಅಲೈಡ್ ಡೆಮಾಕ್ರಟಿಕ್ ಫೋರ್ಸಸ್, ಬೋಕೋ ಹರಾಮ್, ಅಲ್ ಶಬಾಬ್, ಆರೆಸ್ಸೆಸ್ ಮತ್ತು ತಾಲಿಬಾನ್ ಸೇರಿವೆ.
ಇಂಟರ್ ನ್ಯಾಷನಲ್ ಕ್ರಿಶ್ಚಿಯನ್ ಕನ್ಸರ್ನ್ ಎಂಬ ಸಂಸ್ಥೆಯು 2011 ಪರ್ಸಿಕ್ಯೂಟರ್ ಆಫ್ ದಿ ಇಯರ್ ಅವಾರ್ಡ್ಸ್ ನ ವರದಿಯನ್ನು ಬಿಡುಗಡೆಗೊಳಿಸಿದೆ. ಜಗತ್ತಿನ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಿದ ಪ್ರಮುಖ ಏಳು ಮಂದಿಯಲ್ಲಿ ಮೋದಿಯನ್ನು ಕೂಡ ಉಲ್ಲೇಖಿಸಿದೆ.
ಭಾರತದಲ್ಲಿ ಮೋದಿ ಸರ್ಕಾರ, ಆರೆಸ್ಸೆಸ್ ಸಂಘಟನೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಪ್ರಾಯೋಜಿತ ದಬ್ಬಾಳಿಕೆಯನ್ನು ಕೊನೆಗೊಳಿಸುವ ಸಲುವಾಗಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಭಾರತದ ವಿರುದ್ಧ ಆರ್ಥಿಕ ಮತ್ತು ವೀಸಾ ನಿರ್ಬಂಧಗಳನ್ನು ಹೇರಬೇಕು ಎಂದು ಅದು ತನ್ನ ವರದಿಯಲ್ಲಿ ಒತ್ತಾಯಿಸಿದೆ.
ಇದು ನಮ್ಮ ಸಂಸ್ಥೆಯಿಂದ ಐತಿಹಾಸಿಕ ಸಂಶೋಧನಾ ಯೋಜನೆಯಾಗಿದೆ ಎಂದು ICC ಅಧ್ಯಕ್ಷ ಜೆಫ್ ಕಿಂಗ್ ಅವರು ವರದಿಯ ಬಗ್ಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.